ನಗರದಲ್ಲಿ ಮಾತನಾಡಿದ ಅವರು ‘ ಸಿಎಂ ದೊಡ್ಡ ದೇವಸ್ಥಾನವಾದ ಆದಿಚುಂಚನಗಿರಿ ಸ್ವಾಮೀಜಿ ಕನಸು ನನಸು ಮಾಡಲು ಹೋಗಿದ್ದಾರೆ. ಕಾಲಭೈರವೇಶ್ವರನ ಭೂಮಿ ಪೂಜೆಗೆ ಹೋಗಿದ್ದಾರೆ. ಆ ಕಾಲಭೈರವೇಶ್ವರ ನಮಗೂ ಅವರಿಗೂ ಒಳ್ಳೆದು ಮಾಡಲಿ ಎಂದರು.
ಸಿಎಂ ದ್ವೇಷದ ರಾಜಕಾರಣ ಬಿಟ್ಟು., ಅಭಿವೃದ್ಧಿ ಕೆಲಸ ಮಾಡಲಿ, ಮುಖ್ಯಮಂತ್ರಿಗಳ ಫೇಸ್ ಬುಕ್ ಖಾತೆಯಲ್ಲಿ ಅವರ ಕಾರ್ಯಕರ್ತರು ಕೆಟ್ಟದಾಗಿ ಕಮೆಂಟ್ ಮಾಡ್ತಿದ್ದಾರೆ, ಆ ಭಾಷೆಯಿಂದ ಹೊರ ಬಂದು ಟೀಕೆ ಟಿಪ್ಪಣಿ ಮಾಡಬೇಕು. ನೇರವಾಗಿ ಬಿಜೆಪಿ ಫೇಸ್ ಬುಕ್ ಅಭಿಮಾನಿಗಳ ಮೇಲೆ ಕೇಸ್ ಹಾಕುವುದು ಸರಿಯಲ್ಲ ಎಂದರು.
ಸಚಿವ ಜಿಟಿ ದೇವೇಗೌಡ ಅವರು ಒಳ್ಳೆಯವಾದ ರಾಜಕಾರಿಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಗೌರವವಿದೆ. ಹಾಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ, ಕರ್ನಾಟಕಕ್ಕೆ ಅಂತಹ ರಾಜಕಾರಣಿ ಅಗತ್ಯವಿದೆ ಎಂದರು.