ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿಚಾರದಲ್ಲಿ ನೀಡಿದ ಹೇಳಿಕೆ ಖಂಡಿಸಿ ಆರ್‌ಎಸ್‌ಎಸ್‌ನ ಧ್ರುತಿಮನ್ ಜೋಷಿ ಅವರು ಮಾನನಷ್ಟ ಮೊಕದ್ದಮೆಯನ್ನು ರಾಹುಲ್ ಅವರೊಂದಿಗೆ ಸೋನಿಯಾ ಗಾಂಧಿ ಮತ್ತು ಸಿಪಿಐ(ಎಂ) ನಾಯಕ ಸೀತಾರಾಮ್ ಯಚೂರಿ ಅವರ ವಿರುದ್ಧವೂ ಕೇಸು ದಾಖಲಿಸಿದ್ದರು. ಇನ್ನು ರಾಹುಲ್ ಗಾಂಧಿಯವರ ಪರ ವಕೀಲರು ನ್ಯಾಯಾಲಯ ಮುಂದೆ ಚುನಾವಣಾ ಪ್ರಚಾರದಲ್ಲಿ ಆರೋಪ-ಪ್ರತ್ಯಾರೋಪಗಳನ್ನು ಮಾಡುವುದು ಸಹಜ ಇದಲ್ಲದೇ, ರಾಹುಲ್ ಗಾಂಧಿಯವರು ಹೇಳಿರುವುದು ಆರ್.ಎಸ್.ಎಸ್ ಮನಸ್ಥಿತಿಗಳು ಉಳ್ಳವರು ಈ ರೀತಿ ಹತ್ಯೆ ಮಾಡಿರುವುದು ಸಂಭವ ಹೆಚ್ಚಿರುತ್ತದೆ.
ಇದಲ್ಲದೇ ಇಲ್ಲಿ ವ್ಯಕ್ತಿಯನ್ನು ಉಲ್ಲೇಖ ಮಾಡಿ ರಾಹುಲ್ ಗಾಂಧಿ ಹೇಳಿರದ ಕಾರಣ ಈ ಕೇಸ್ ಅನ್ನು ಮುಂದುವರಿಸುವುದು ಅವಶ್ಯಕತೆ ಇಲ್ಲ ಅಂತ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೇಸಿಗೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿಯವರು ತಪ್ಪಿತಸ್ಥನಲ್ಲನೆಂದು ತೀರ್ಪು ನೀಡಿದೆ ಎನ್ನಲಾಗಿದೆ.