ಜೆಡಿಎಸ್ ಶಾಸಕರು ಮತ್ತು ಸಚಿವರ ಜೊತೆ ಪ್ರತ್ಯೇಕ ಸಭೆ ನಡೆಸಿದ ಹೆಚ್ಡಿಕೆ, ಜೆಡಿಎಸ್ ಶಾಸಕರಿಗೆ ಖಡಕ್ ವಾರ್ನ್ ಮಾಡಿದ್ದು, ರಾಜೀನಾಮೆ ಕೊಟ್ಟ ಶಾಸಕರ ವಿರುದ್ಧ ಸಿಎಂ ಗರಂ ಆಗಿದ್ದಾರೆ. ನಂಬಿಕೆ ದ್ರೋಹ ಮಾಡಿ ಹೋದವರನ್ನು ಮನವೊಲಿಸುವ ಅವಶ್ಯಕತೆ ಇಲ್ಲ. ಯಾರೂ ಅವರ ಮನವೊಲಿಸುವ ಕೆಲಸ ಮಾಡಬೇಡಿ. ಹೋದವರು ಹೋಗಲಿ, ಅವರು ನಂಬಿಕೆಗೆ ಅರ್ಹರಲ್ಲ. ಉಳಿದ ನೀವೆಲ್ಲಾ ಶಾಸಕರು ಒಟ್ಟಾಗಿರಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಮೈತ್ರಿ ಸರ್ಕಾರದ ಕಾಂಗ್ರೆಸ್-ಜೆಡಿಎಸ್ ಪಕ್ಷದ ಬರೋಬ್ಬರಿ 12 ಶಾಸಕರು ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರಕ್ಕೆ ಭಾರೀ ಶಾಕ್ ಉಂಟುಮಾಡಿದೆ.ಹೀಗಾಗಿ ರಾಜೀನಾಮೆ ನೀಡಿದ ಜೆಡಿಎಸ್ ಶಾಸಕರ ಮನವೊಲಿಕೆ ಮಾಡುವುದು ಬೇಡ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.