ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ರುಸ್ತುಂ’ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ನಡುವೆ ಅವರೀಗ ಲಂಡನ್ನಲ್ಲಿದ್ದಾರೆ. ಕಾರಣ ಬಲ ಭುಜದ ಶಸ್ತ್ರ ಚಿಕಿತ್ಸೆಗೆ ಅವರು ಒಳಗಾಗಿದ್ದಾರೆ. ಆದ್ದರಿಂದ ಅಲ್ಲೇ ತಂಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ ಅಷ್ಟೊಂದು ಆ್ಯಕ್ಟೀವ್ ಆಗಿ ಟೈಮ್ ಸ್ಪೆಂಡ್ ಮಾಡೋರಲ್ಲ. ಆದರೆ. ಇಂದು ನಾನು ಸೇಫ್ ಎಂದು ಟ್ವೀಟ್ ಮಾಡಿದ್ದಾರೆ.
ಹೌದು ಜುಲೈ 12, ಅಂದರೆ ನಾಳೆ ಶಿವಣ್ಣನ ಜನ್ಮದಿನ. ಪ್ರತಿ ವರ್ಷ ಅಭಿಮಾನಿಗಳ ಜೊತೆ ಶಿವಣ್ಣ ಬರ್ತ್ಡೇ ಸೆಲೆಬ್ರೇಟ್ ಮಾಡ್ತಿದ್ರು. ಆದರೆ ಈ ಬಾರಿ ಇಂಗ್ಲೆಂಡ್ನಲ್ಲಿ ಇರುವುದರಿಂದ ಅವರು ತನ್ನ ಅಭಿಮಾನಿಗಳ ಜೊತೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರು ಫೇಸ್ಬುಕ್ ಲೈವ್ ಮೂಲಕ ಅಭಿಮಾನಿಗಳ ಮುಂದೆ ಬರುವ ಮನಸ್ಸು ಮಾಡಿದ್ದಾರೆ.
ತಮ್ಮದೊಂದು ಫೋಟೋ ಹಾಕಿ ಶಿವಣ್ಣ, ”ನಿಮ್ಮೆಲರ ಪ್ರೀತಿ ಹಾರೈಕೆ ಆಪರೇಷನ್ successful and ನಿಮ್ಮ ಶಿವಣ್ಣ safe.ನಾನಿನ್ನು ಲಂಡನ್ನಲ್ಲೆ ಇರುವ ಕಾರಣ ಈ ಹುಟ್ಟುಹಬಕ್ಕೆ ನಿಮ್ಮೆಲ್ಲರನ್ನು ತುಂಬಾ ಮಿಸ್ ಮಾಡಿಕೊಳ್ಳುವೆ. ಆದಷ್ಟು ಬೇಗ ವಾಪಸ್ ಬರುವೆ, ಹಾಗೆ ಇಂದು ಮಧ್ಯರಾತ್ರಿ 12ಕ್ಕೆ ನನ್ನ official facebook pageನಲ್ಲಿ LIVE ಬರುವೆ ” ಎಂದು ಟ್ವೀಟ್ ಮಾಡಿದ್ದಾರೆ. ಇದು ಶಿವಣ್ಣನ ಮೊದಲ ಟ್ವೀಟ್ ಕೂಡ ಹೌದು..!
ನಿಮ್ಮೆಲರ ಪ್ರೀತಿ ಹಾರೈಕೆ ಆಪರೇಷನ್ successful and ನಿಮ್ಮ ಶಿವಣ್ಣ safe.ನಾನಿನ್ನು ಲಂಡನ್ನಲ್ಲೆ ಇರುವ ಕಾರಣ ಈ ಹುಟ್ಟುಹಬಕ್ಕೆ ನಿಮ್ಮೆಲ್ಲರನ್ನು ತುಂಬಾ ಮಿಸ್ ಮಾಡಿಕೊಳ್ಳುವೆ. ಆದಷ್ಟು ಬೇಗ ವಾಪಸ್ ಬರುವೆ, ಹಾಗೆ ಇಂದು ಮಧ್ಯರಾತ್ರಿ 12ಕ್ಕೆ ನನ್ನ official facebook pageನಲ್ಲಿ LIVE ಬರುವೆ https://t.co/BgFqGNhnDu pic.twitter.com/6AmGCPYh84
— DrShivaRajkumar (@NimmaShivanna) July 11, 2019