ಲೋಕಸಭೆ ಕಲಾಪದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೇರಳ ಸರ್ಕಾರದ ನಿಷೇಧವನ್ನು ಪರಿಗಣಿಸಿ ಸಾಲವನ್ನು ವಶಪಡಿಸಿಕೊಳ್ಳುವ ವಿಚಾರದಲ್ಲಿ ಬ್ಯಾಂಕುಗಳು ರೈತರಿಗೆ ಕಿರುಕುಳ ನೀಡದಂತೆ ಆರ್ ಬಿಐಗೆ ಕೇಂದ್ರ ಸರ್ಕಾರ ಆದೇಶ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ನನ್ನ ಕ್ಷೇತ್ರ ವಯನಾಡಿನಲ್ಲಿ ನಿನ್ನೆ ಒಬ್ಬ ರೈತ ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ನಿಂದ ತೆಗೆದುಕೊಂಡ ಸಾಲ ಹಿಂತಿರುಗಿಸದ್ದಕ್ಕೆ ವಯನಾಡಿನಲ್ಲಿ 8 ಸಾವಿರ ರೈತರಿಗೆ ಬ್ಯಾಂಕ್ ನೊಟೀಸ್ ನೀಡಲಾಗಿದೆ.ಸಂಬಂಧಪಟ್ಟ ಕಾಯ್ದೆಯಡಿ ಬ್ಯಾಂಕ್ ಸಾಲದ ಜೊತೆ ರೈತರ ಆಸ್ತಿಗಳನ್ನು ಜೋಡಣೆ ಮಾಡಿರುವುದರಿಂದ ಸಾಲದ ಮೊತ್ತ ಮಿತಿಮೀರಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ ಎಂದರು