ಈ ವಿಶ್ವಕಪ್ ನಲ್ಲಿ ಬೌನ್ಸರ್ ಬೌಲ್ ಗಳು ಅನೇಕ ಬ್ಯಾಟ್ಸ್ ಮ್ಯಾನ್ ಗಳಿಗೆ ಗಾಯಾಳುಗಳಾಗಿ ಮಾಡಿವೆ,
ಇಂದು ನಡೆಯುತ್ತಿರುವ ಎರಡನೇ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರಿ ಅವರು ಮಾರಣಾಂತಿಕ ಬೌಲಿಂಗ್ ದಾಳಿಗೆ ಗಾಯಗೊಂಡಿರುವ ವಿಡಿಯೋ ಭಯಾನಕವಾಗಿದೆ.
ಬರ್ಮಿಂಗ್ ಹ್ಯಾಮ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚರ್ ಎಸೆದ ಮಾರಕ ಚೆಂಡು ಕ್ಯಾರಿ ಮುಖಕ್ಕೆ ಬಡಿದ ಘಟನೆ ನಡೆಯಿತು. ಈ ವೇಳೆ ಕ್ಯಾರಿ ತಲೆಗೆ ಹಾಕಿದ್ದ ಹೆಲ್ಮೆಟ್ ಕಿತ್ತು ಬಂದಿತ್ತು.
ಆರ್ಚರ್ 139 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಚೆಂಡನ್ನು ಬಾರಿಸಲು ಹೋಗಿದ್ದು ಕ್ಯಾರಿ ಗಲ್ಲಕ್ಕೆ ಗಾಯವಾಗಿ ರಕ್ತ ಬಂದಿತ್ತು. ಕೂಡಲೇ ಅವರ ಮುಖಕ್ಕೆ ಬ್ಯಾಂಡೇಜ್ ಸುತ್ತಿದ್ದರು. ನಂತರ ಬ್ಯಾಟಿಂಗ್ ಮಾಡಿದ ಕ್ಯಾರಿ 47 ರನ್ ಗಳಿಸಿದ್ದಾಗ ಔಟಾದರು.
How cool are you on a scale of 1 – Alex Carey? #ENGvAUS ?pic.twitter.com/xJm7S0c1Ya
— Lucy Bluck (@LucyBluck_) July 11, 2019