No menu items!
9.6 C
Munich
Tuesday, April 21, 2026

ತೋಳು ನೋಡು ಉಕ್ಕು, ಒಂದೇ ಏಟು ಸಾಕು, ಬಂದ ನೋಡು ಪೈಲ್ವಾನ್‌..!

Must read

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಕನ್ನಡದ ಬಾದ್ ಷಾ ಅನ್ನೋ ಹೊಸ ಬಿರುದಿನೊಂದಿಗೆ ‘ಪೈಲ್ವಾನ್’ ಆಗಿ ಅಖಾಡಕ್ಕೆ ಇಳಿಯಲು ರೆಡಿಯಾಗಿದ್ದಾರೆ ಪೈಲ್ವಾನ್ ರಿಲೀಸ್​ಗೆ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.
ಅಭಿಮಾನಿಗಳ ಮುಂದೆ ಹೊಸ ಅವತಾರದಲ್ಲಿ ಬರಲು ಸುದೀಪ್ ಕೂಡ ತುಂಬಾ ಉತ್ಸುಕರಾಗಿದ್ದಾರೆ. ಹೆಬ್ಬುಲಿ ಸಿನಿಮಾ ಖ್ಯಾತಿಯ ನಿರ್ದೇಶಕ ಕೃಷ್ಣ ಹಾಗೂ ಕನ್ನಡದ ಮಾಣಿಕ್ಯ ಸುದೀಪ್ ಅವರ ಕಾಂಬಿನೇಷನ್​ನ ಈ ಸಿನಿಮಾ ಸೆಟ್ಟೇರಿದಲ್ಲಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಟೀಸರ್ ಕೂಡ ಸದ್ದು ಮಾಡಿದೆ. ಈಗ ಥೀಮ್ ಸಾಂಗ್ ಕೂಡ ರಿಲೀಸ್ ಆಗಿದೆ.
ಹೌದು ಪೈಲ್ವಾನ್​ನ ಥೀಮ್ ಸಾಂಗ್ ಇಂದು ರಿಲೀಸ್ ಆಗಿದ್ದು, ಬಿಡುಗಡೆಯಾದ ಕೆಲವೇ ಹೊತ್ತಲ್ಲಿ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸುತ್ತಿದೆ. ‘ತೋಳು ನೋಡು ಉಕ್ಕು, ಒಂದೇ ಏಟು ಸಾಕು, ದೇವ್ರೇ ನಿಂಗೇ ದಿಕ್ಕು, ಬಂದ ನೋಡು ಪೈಲ್ವಾನ್‌’ ಅನ್ನೋ ಹಾಡು ಇದಾಗಿದೆ. ಈ ಹಾಡನ್ನು ಬರೆದವರು ವಿ. ನಾಂಗೇಂದ್ರ ಪ್ರಸಾದ್. ಇದಕ್ಕೆ ಸಂಗೀತ ಬಲ ತುಂಬಿದವರು ಅರ್ಜುನ್ ಜನ್ಯಾ. ಈ ಹಾಡಿನಲ್ಲಿ ಸುದೀಪ್ ದೇಹದಾರ್ಡ್ಯಕ್ಕೂ ಫ್ಯಾನ್ಸ್ ಫಿದಾ ಆಗಿದ್ದಾರೆ. ಅರೆ, ನೀವಿನ್ನೂ ಈ ಥೀಮ್ ಸಾಂಗ್ ನೋಡಿಲ್ವಾ..? ಇಲ್ಲಿದೆ ಆ ವಿಡಿಯೋ ಲಿಂಕ್..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article