ಮೈತ್ರಿ ಸರ್ಕಾರದ ಉಳಿವಿಗಾಗಿ ಐವರು ಶಾಸಕರ ನೆರವು ಬೇಕಾಗಿದೆ. ಐವರು ಶಾಸಕರ ನೆರವು ಸಿಕ್ಕರೆ ಮೈತ್ರಿ ಸರ್ಕಾರ ಸೇಫ್ ಆಗಲಿದೆ. ಈ ಐದು ಶಾಸಕರ ನಿರ್ಧಾರದ ಮೇಲೆ ದೋಸ್ತಿ ಸರ್ಕಾರದ ಭವಿಷ್ಯ ನಿಂತಿದೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷವು ರಾಮಲಿಂಗ ರೆಡ್ಡಿ, ರೋಷನ್ ಬೇಗ್, ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಅವರು ನೆರವು ನೀಡಬಹುದೆಂಬ ಲೆಕ್ಕಚಾರದಲ್ಲಿದೆ. ಜೊತೆಗೆ ರೋಷನ್ ಬೇಗ್ ಮತ್ತು ರಾಮಲಿಂಗ ರೆಡ್ಡಿ ಮೂಲಕ ಓರ್ವ ಅತೃಪ್ತ ಶಾಸಕನ ಮನವೊಲಿಕೆ ಮಾಡಿಸುವ ನಂಬಿಕೆ ಕಾಂಗ್ರೆಸ್ಸಿಗರದ್ದಾಗಿದೆ.ಭೈರತಿ ಬಸವರಾಜು, ಮುನಿರತ್ನ, ಎಸ್.ಟಿ. ಸೋಮಶೇಖರ್ ಮನವೊಲಿಕೆಗೂ ಪ್ಲಾನ್ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.