ನಾವು ರಿವರ್ಸ್ ಆಪರೇಷನ್ ಮಾಡಬೇಕೆಂದು ಏನಿಲ್ಲ. ನಮ್ಮವರು ವಾಪಸ್ ಬಂದರೂ ಸರ್ಕಾರ ಉಳಿಯುತ್ತದೆ ಅಂತ ಹೇಳಿದರು. ಇನ್ನು ರಮೇಶ್ ಪಕ್ಷಕ್ಕೆ ವಾಪಸ್ ಬರುವುದಿಲ್ಲ. ಅವನಿಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಹುದ್ದೆ ಕೊಟ್ಟರು ಸರ್ಕಾರ ಕೆಡುವುವ ಕೆಲಸ ಮಾತ್ರ ಬಿಡುವುದಿಲ್ಲ. ಸದ್ಯಕ್ಕೆ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ತೊಂದರೆ ಇಲ್ಲ. ರಾಜೀನಾಮೆ ನೀಡಿದ ನಮ್ಮ ಪಕ್ಷದ ಶಾಸಕರು ವಾಪಸ್ ಬರುತ್ತಾರೆ ಅಂತ ಹೇಳಿದರು.
ಬಿಜೆಪಿ ಪಕ್ಷ ಅಧಿಕಾರ ತರಲು ಅಮಿತ್ ಶಾ ಪ್ರಯತ್ನ ಮಾಡುತ್ತಿದ್ದಾರೆ.ನಾವು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ಬೇರೆಯವರನ್ನು ಸಚಿವರನ್ನಾಗಿ ಮಾಡಿದರೂ, ಇಲ್ಲ ನಮ್ಮನ್ನ ಮುಂದುವರಿಸಿದರೂ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.