ನಾಗತಿಹಳ್ಳಿ ಚಂದ್ರಶೇಖರ್ ..ಸದಾ ವಿಭಿನ್ನತೆ, ಹೊಸತನಕ್ಕೆ ಹೆಸರಾಗಿರುವ ಸಿನಿ ಮೇಷ್ಟ್ರು. ನಾಗತಿಹಳ್ಳಿ ಸಿನಿಮಾಗಳು ಅಂದರೆ ಅದು ಸಿನಿಮಾ ಟೈಟಲ್ ನಿಂದಲೇ ಸದ್ದು ಮಾಡುತ್ತದೆ. ಎಲ್ಲರ ಗಮನ ಸೆಳೆಯಬಲ್ಲ ಟೈಟಲ್ ಕೊಟ್ಟಿರ್ತಾರೆ ನಾಗತಿಹಳ್ಳಿ.
ಹಿಂದೆ ನಾಗತಿ ಹಳ್ಳಿ ಅಮೆರಿಕಾ ಅಮೆರಿಕಾ ಸಿನಿಮಾ ಮಾಡಿದ್ದರು.ನವಿರಾದ ಪ್ರೇಮ ಕಾವ್ಯದ ಆ ಸಿನಿಮಾ ಇಂದಿಗೂ ಸೂಪರ್ ಹಿಟ್ಟೇ..
ಈಗ ನಾಗತಿಹಳ್ಳಿ ಇಂಡಿಯಾ VS ಇಂಗ್ಲೆಂಡ್ ಎನ್ನುವ ಸಿನಿಮಾ ಮಾಡ್ತಿದ್ದಾರೆ. ಇಂಗ್ಲೆಂಡ್ ನಲ್ಲೇ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದಾರೆ. ಹೆಸರು ಕೇಳಿದರೆ ಇದು ಕ್ರಿಕೆಟಾ ಅಂತ ಅನಿಸಬಹುದು. ಆದರೆ ಇದು ಕ್ರಿಕೆಟ್ ಅಲ್ಲ ಅಂತ ಸಿನಿಮಾದ ಸಬ್ ಟೈಟಲ್ಲೇ , ಅಡಿ ಬರಹವೇ ಹೇಳುತ್ತಿದೆ.
ವಸಿಷ್ಠ ಸಿಂಹ , ಮಾನ್ವಿತಾ ಕಾಮತ್ ಈ ಸಿನಿಮಾದ ನಾಯಕ – ನಾಯಕಿಯರು.
ಅಂದಹಾಗೆ ಈ ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದ್ದು ಚಿತ್ರೀಕರಣ ಮುಗಿದ ಬಳಿಕವಷ್ಟೇ ಈ ಟೈಟಲ್ ಅಂತಿಮ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಕೂಡ ನಟಿಸಿದ್ದಾರೆ.
ಇದು ನಾಗತಿಹಳ್ಳಿ ಅವರ ಬಹುದೊಡ್ಡ ಕನಸಿನ ಸಿನಿಮಾ. ತಮ್ಮ ಈ ಕನಸಿಗೆ ಒಂದೊಳ್ಳೆ ಹೆಸರಿಡಲು ನಾಗತಿಹಳ್ಳಿ ಬಹು ದಿನದಿಂದ ಯೋಚಿಸ್ತಿದ್ರು. ಈಗ ಇಂಡಿಯಾ VS ಇಂಗ್ಲೆಂಡ್ ಎಂಬ ಹೆಸರನ್ನಿಟ್ಟಿದ್ದಾರೆ.
ಅಮೆರಿಕಾ ಅಮೆರಿಕಾಕ್ಕಿಂತಲೂ ಬಹುದೊಡ್ಡ ಹೆಸರನ್ನು ಇಂಡಿಯಾ vs ಇಂಗ್ಲೆಂಡ್ ಸಿನಿಮಾ ಕೂಡ ಅಷ್ಟೇ ಸದ್ದು ಮಾಡುತ್ತದಾ ಕಾದು ನೋಡಣ.
ಇನ್ನು ಕನ್ನಡದಲ್ಲಿ ಸಾಕಷ್ಟು ಹೊಸ ಹೊಸ ಸಿನಿಮಾಗಳು ಬರ್ತಾ ಇವೆ. ಹಳಬರ ಸಿನಿಮಾಗಳ ಜೊತೆಗೆ ಹೊಸಬರ ಸಿನಿಮಾಗಳು ಕೂಡ ಸಿಕ್ಕಾಪಟ್ಟೆ ಸೌಂಡು ಮಾಡ್ತಾ ಇವೆ.ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನದ್ದೇ ಹವಾ ಎಲ್ಲೆಡೆ..!