ಧೋನಿ ನಿವೃತ್ತಿ ಘೋಷಣೆ ಮಾಡದೆ ಹೋದ್ರೆ ಟೀಂ ನಿಂದ ಹೊರ ಹೋಗ್ತಾರಾ?

Date:

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ ಈಗ ಎಲ್ಲರ ಕಣ್ಣಿದೆ. ಧೋನಿ ಯಾವಾಗ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳ್ತಾರೆ ಎಂಬ ಪ್ರಶ್ನೆ ಎಲ್ಲರ ಮುಂದಿದೆ. ಆದ್ರೆ ಈ ಬಗ್ಗೆ ಧೋನಿ ಯಾವುದೇ ಉತ್ತರ ನೀಡಿಲ್ಲ. ಒಂದು ವೇಳೆ ಧೋನಿ ತಾವೇ ನಿವೃತ್ತಿ ಘೋಷಣೆ ಮಾಡದೆ ಹೋದ್ರೆ ಟೀಂ ಇಂಡಿಯಾದಿಂದ ಹೊರ ಹಾಕೋದು ನಿಶ್ಚಿತ ಎನ್ನಲಾಗ್ತಿದೆ.

ವಿಶ್ವಕಪ್ ನಲ್ಲಿ ಧೋನಿ ನಿಧಾನ ಆಟ ಚರ್ಚೆಗೆ ಕಾರಣವಾಗಿದೆ. ಸೆಮಿಫೈನಲ್ ನಲ್ಲಿ ಧೋನಿ ಆರಂಭದಲ್ಲಿ ಆಡಿದ ನಿಧಾನ ಆಟ ಕೆಲವರ ಕೋಪಕ್ಕೂ ಕಾರಣವಾಗಿತ್ತು. ಧೋನಿ ವಿಶ್ವಕಪ್ ಕೊನೆ ಪಂದ್ಯದಲ್ಲಿ ನಿವೃತ್ತಿ ಘೋಷಣೆ ಮಾಡ್ತಾರೆ ಎನ್ನಲಾಗಿತ್ತು. ಆದ್ರೆ ಧೋನಿ ಘೋಷಣೆ ಮಾಡಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ, ಧೋನಿ ನಿವೃತ್ತಿ ಘೋಷಣೆ ಮಾಡದೆ ಹೋದ್ರೆ ತಂಡದಿಂದ ಹೊರ ಬೀಳ್ತಾರಂತೆ.

ಮುಖ್ಯ ಸೆಲೆಕ್ಟರ್ ಎಂ.ಎಸ್.ಕೆ. ಪ್ರಸಾದ್,‌ ಧೋನಿ ಜೊತೆ ಮಾತನಾಡಲಿದ್ದಾರೆ ಎನ್ನಲಾಗಿದೆ.ಧೋನಿಯವರನ್ನು ಹೊರಗಿಡುವ ಕಾಲ ಬಂದಿದೆ ಎಂದು ಪ್ರಸಾದ್ ಸೂಚನೆ ನೀಡಿದ್ದಾರಂತೆ. ಬಿಸಿಸಿಐ ಮೂಲಗಳ ಪ್ರಕಾರ, ಧೋನಿ 6,7 ನೇ ಸ್ಥಾನದಲ್ಲಿ ಬಂದ್ರೂ ರನ್ ಗಳಿಸಲು ಹೆಣಗಾಡಿದ್ರು. ಇದು ತಂಡಕ್ಕೆ ಹಾನಿಕಾರಕ. 2020 ರ ಟಿ-20 ವಿಶ್ವಕಪ್ ನಲ್ಲಿ ಅವ್ರು ಆಡೋದು ಅನುಮಾನ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವ್ರು ಹೋಗ್ತಿಲ್ಲ. ಈ ಮಧ್ಯೆ ಅವ್ರೇ ನಿವೃತ್ತಿ ಘೋಷಣೆ ಮಾಡಿದ್ರೆ ಬೆಸ್ಟ್ ಎಂದು ಅಧಿಕಾರಿ ಮೂಲ ಹೇಳಿವೆ.

Share post:

Subscribe

spot_imgspot_img

Popular

More like this
Related

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಬೆಂಗಳೂರು: ಐತಿಹಾಸಿಕ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಇಂದು...

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ!

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ! ಬೆಂಗಳೂರು: ಸಿಮೆಂಟ್ ಮಿಕ್ಸರ್...

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು!

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು! ಕಿವಿ...

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ ನಿಗದಿ

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ...