ವಿಶ್ವಾಸಮತಯಾಚನೆಯ ಚರ್ಚೆಯಲ್ಲಿ ಪಕ್ಷಾಂತರ ಕಾಯ್ದೆ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ ಮಾಡುತ್ತಿದ್ದ ವೇಳೆ ಸಿದ್ದರಾಮಯ್ಯಗೆ ಬಿಜೆಪಿ ಶಾಸಕ ಮಾಧುಸ್ವಾಮಿ ಅಡ್ಡಿಪಡಿಸಿದರು. ಇದರಿಂದ ಸಿಟ್ಟಿಗೆದ್ದ ಡಿಕೆಶಿ ಅವರು, ಸುಪ್ರೀಂ ತೀರ್ಪು ಕೊಟ್ಟ ಮೇಲೆ ಇನ್ನೇನು ಬೇಕು. ನಿಮ್ಮ ಸಲಹೆಗಳು ನಮಗೆ ಬೇಕಿಲ್ಲ ಎಂದು ಗರಂ ಆಗಿದ್ದಾರೆ.
ವಿಶ್ವಾಸಮತಯಾಚನೆಯ ಚರ್ಚೆಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡುತ್ತಾ, ಮೊದಲೆಲ್ಲ ಪಕ್ಷಾಂತರ ಕಾಯ್ದೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.1967 ರಲ್ಲಿ ಗಯಾಲಾಲ್ ಅವರು ಮೂರು ಸಲ ಪಕ್ಷಾಂತರ ಮಾಡಿದ್ದರು. ಆಗಿನಿಂದ ಇಡೀ ದೇಶ ಪಕ್ಷಾಂತರ ಕಾಯ್ದೆ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಿತ್ತು ಎಂದು ಹೇಳಿದರು.