ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಈಶ್ವರಪ್ಪ, ಒಂದು ಕಡೆ ಎಲ್ಲಾ ಸಚಿವರ ರಾಜೀನಾಮೆ ನಾಟಕ, ಇನ್ನೊಂದು ಕಡೆ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿ ಕಡತಗಳಿಗೆ ಸಹಿ, ಸಚಿವರೇ ಇಲ್ಲದ ಸರ್ಕಾರ ಯಾವ ಪುರುಷಾರ್ಥಕ್ಕಾಗಿ ಮುಖ್ಯಮಂತ್ರಿಗಳೇ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ, ಹರಿದು ಹೋದ ಸ್ಪೀಕರ್ ಚಿತ್ರ ಟ್ವೀಟ್ ಮಾಡುವ ಮೂಲಕ ಈ ಸ್ಪೀಕರ್ ಕೆಟ್ಟು ಹೋಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರ ಕಾಲೆಳೆದಿದ್ದಾರೆ.