ಸದ್ಯ ರಾಜ್ಯದ ರಾಜಕೀಯ ಸನ್ನಿವೇಶದಲ್ಲಿ ಯಾವುದೇ ಮಹತ್ವದ ನಿರ್ಣಯ ಕೈಗೊಳ್ಳಬೇಡಿ. ಯಾವುದೇ ಫೈಲ್ ಕ್ಲಿಯರ್ ಮಾಡಬೇಡಿ. ಅಲ್ಲದೇ ವರ್ಗಾವಣೆ ಆದೇಶ ನೀಡಬಾರದು ಎಂದು ರಾಜ್ಯಪಾಲ ವಜೂಭಾಯ್ ವಾಲಾ ಅವರು ಮೈತ್ರಿ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಗೆ ರಾಜ್ಯಪಾಲರು ಈ ಪತ್ರ ರವಾನಿಸಿದ್ದಾರೆ. ಒಟ್ಟಿನಲ್ಲಿ ವಿಶ್ವಾಸಮತಯಾಚನೆಗೆ ಎರಡು ಬಾರಿ ಗಡುವು ನೀಡಿದ್ದರೂ ಮೈತ್ರಿ ನಾಯಕರು ಕ್ಯಾರೆ ಎನ್ನುತ್ತಿಲ್ಲ.ಹೀಗಾಗಿ ರಾಜ್ಯಪಾಲರ ಈ ಆದೇಶವನ್ನು ಪಾಲಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.