ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ ಎಲ್ಲರೂ ಅಧಿಕಾರದ ಗದ್ದುಗೆ ಏರಲು ಹಾತೊರೆಯುತ್ತಿದ್ದಾರೆ, ಆದ್ದರಿಂದ ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸಲಿ. ಆಗಲಾದರೂ ರಾಜ್ಯ ಅಭಿವೃದ್ಧಿಯಾಗಬಹುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮತ್ತೆ ಚುನಾವಣೆ ಆಗಬಾರದು, ರಾಷ್ಟ್ರಪತಿ ಆಡಳಿತವೂ ಬರಬಾರದು. ಸರ್ವಪಕ್ಷೀಯ ಸರ್ಕಾರವೇ ರಚನೆ ಆಗಲಿ ಎಂದರು. ಬಿಜೆಪಿ ಹಿಂದೂ ಪರ ಎಂದು ಮೈತ್ರಿ ಸರ್ಕಾರ ರಚನೆ ಮಾಡಲಾಗಿದೆ, ಆದರೆ ಬಿಜೆಪಿ ಜಾತ್ಯಾತೀತ ಪಕ್ಷವೂ ಹೌದು., ಇದಕ್ಕಾಗಿ ಮೂರು ಪಕ್ಷ ಜೊತೆ ಸರ್ಕಾರ ರಚಿಸಲಿ, ಆಗ ರೆಸಾರ್ಟ್ ರಾಜಕೀಯ, ಪಕ್ಷಾಂತರ ಬಂದ್ ಆಗುತ್ತದೆ..ಎಲ್ಲ ಪಕ್ಷಗಳು ಒಂದಾಗಿ ಸರ್ಕಾರ ರಚಿಸಲಿ ಎಂದು ಶ್ರೀಗಳು ಆಗ್ರಹಿಸಿದರು