ವಿಶ್ವಾಸಮತ ಯಾಚನೆ ಮಾಡಲು ಮುಂದಾಗಿರುವ ದೋಸ್ತಿ ನಾಯಕರಿಗೆ ಮತ್ತೊಂದು ಹಿನ್ನಡೆಯಾಗಿದೆ. ಜೆಡಿಎಸ್ ಗೆ ಬೆಂಬಲ ನೀಡಿದ್ದ ಬಿ.ಎಸ್.ಪಿ. ಶಾಸಕ ಎನ್. ಮಹೇಶ್ ಯುಟರ್ನ್ ತೆಗೆದುಕೊಂಡಿದ್ದಾರೆ.
ನಾಳೆ ನಡೆಯುವ ವಿಶ್ವಾಸ ಮತಯಾಚನೆಗೆ ಹೋಗುವುದಿಲ್ಲ ಎಂದು ಎನ್. ಮಹೇಶ್ ಹೇಳಿದ್ದಾರೆ. ಪಕ್ಷದ ನಾಯಕರಾದ ಮಾಯಾವತಿಯವರು ತಟಸ್ಥವಾಗಿರುವಂತೆ ಸೂಚಿಸಿದ್ದು, ಹೀಗಾಗಿ ನಾನು ನಾಳೆ ಅಸೆಂಬ್ಲಿಗೆ ಹೋಗುವುದಿಲ್ಲ. ಎರಡು ದಿನ ಖಾಸಗಿ ಕೆಲಸ ಇದೆ ಎಂದು ಕೊಳ್ಳೇಗಾಲದಲ್ಲಿ ಅವರು ಮಾಹಿತಿ ನೀಡಿದ್ದಾರೆ.
ನಾಳೆ ನಡೆಯುವ ವಿಶ್ವಾಸ ಮತಯಾಚನೆಗೆ ನಾನು ಹೋಗುವುದಿಲ್ಲ. ಪಕ್ಷದ ನಾಯಕರಾದ ಮಾಯಾವತಿ ತಟಸ್ಥವಾಗಿರುವಂತೆ ಸೂಚನೆ ನೀಡಿದ್ದಾರೆ ಎಂದು ಮಹೇಶ್ ಮಾಹಿತಿ ನೀಡಿದ್ದಾರೆ. ಈಗಾಗಲೇ ಅವರು ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿದ್ದು, ಸ್ಪೀಕರ್ ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.