ಸದನದಲ್ಲಿ ವಿಪ್ ವಿಚಾರವಾಗಿ ಚರ್ಚೆ ನಡೆಯುತ್ತಿದ್ದ ವೇಳೆ ಪ್ರತಿಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಮೇಲೆದ್ದು, 15 ಶಾಸಕರು ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ವಿಪ್ ಜಾರಿಯಾಗುವುದಿಲ್ಲ ಎಂದು ಕೂಡ ತಿಳಿಸಿದೆ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದರು.
ಇನ್ನೂ ಮುಂದುವರೆದು ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನ ಸೂಚನೆಯಂತೆ ಕಾಂಗ್ರೆಸ್ ಜಾರಿಗೊಳಿಸಲು ವಿಪ್ ಅವರಿಗೆ ಅನ್ವಯವಾಗುವುದಿಲ್ಲ.ಹೀಗಾಗಿ ನಿಮ್ಮ ವಿಪ್ ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಬಿಎಸ್ ಯಡಿಯೂರಪ್ಪ ತಿಳಿಸಿಕೊಟ್ಟರು.
ಈ ವೇಳೆ ಎದ್ದು ನಿಂತ ಸಿದ್ದರಾಮಯ್ಯ ನಿಮಗೆ ಕಾನೂನಿನ ಅರಿವಿದ್ಯೋ ಇಲ್ಲವೋ ಗೊತ್ತಿಲ್ಲ. ಕಾನೂನಿನಲ್ಲಿ ಕ್ಲಿಯರ್ ಆಗಿ ಹೇಳಿದೆ ವಿಪ್ ಜಾರಿಗೆ ತಡೆಯಿಲ್ಲ ಎಂದು. ಕೇಲವ ಅವರಿಗೆ ಸದನಕ್ಕೆ ಬರಲು ಒತ್ತಾಯಿಸುವಂತಿಲ್ಲ ಎಂದು ಮಾತ್ರ ಸೂಚಿಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಡಿಯೂರಪ್ಪಗೆ ತಿರುಗೇಟು ನೀಡಿದ್ದಾರೆ.