ರೊಚ್ಚಿಗೆದ್ದಿದ್ದಾರೆ ಸುದೀಪ್ ಪತ್ನಿ ಪ್ರಿಯಾ..!

Date:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಅವರು ಅಭಿನಯಿಸಿರುವ ಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ಸುದೀಪ್ ಅಖಾಡಕ್ಕೆ ಇಳಿಯುತ್ತಿದ್ದಾರೆ.
ಇಲ್ಲಿ ನಾವು ಹೇಳೋಕೆ ಹೊರಟಿರುವುದು ಸುದೀಪ್ ಬಗ್ಗೆಯಲ್ಲ. ಬದಲಿಗೆ ಅವರ ಪತ್ನಿ ಪ್ರಿಯಾ ಅವರ ಬಗ್ಗೆ. ಪ್ರಿಯಾರವರು ರೊಚ್ಚಿಗೆದ್ದು ಬಿಟ್ಟಿದ್ದಾರೆ. ಅಷ್ಟಕ್ಕೂ ಪ್ರಿಯಾ ಸಿಟ್ಟಾಗಿದ್ದಾರೆ ಅಂದ್ರಾ.. ಅವರು ಸಿಟ್ಟಾಗಿದ್ದು ಬಿಬಿಎಂಪಿ ಮೇಲೆ.
ಹೌದು, ಸುದೀಪ್ ಪತ್ನಿ ಪ್ರಿಯಾ ಬಿಬಿಎಂಪಿ ವಿರುದ್ಧ ಫುಲ್ ಗರಂ ಆಗಿದ್ದಾರೆ. ಸಾಮಾನ್ಯವಾಗಿ ಎಲ್ಲೂ ಕೂಡ ಸಿಡಿಮಿಡಿಗೊಳ್ಳದ ಪ್ರಿಯಾ ಬಿಬಿಎಂಪಿ ವಿರುದ್ಧ ಸಾರ್ವಜನಿಕ ಕಳಕಳಿ ಹಿನ್ನೆಲೆಯಲ್ಲಿ ಅವರು ಬಿಬಿಎಂಪಿ ವಿರುದ್ಧ ಸಿಡಿದಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಪ್ರಿಯಾ ಸುದೀಪ್ ಕಿಡಿಕಾರಿದ್ದಾರೆ. “ಈ ಜನರ ಸಮಸ್ಯೆಗಳನ್ನು ನಾನೆ ಕಣ್ಣಾರೆ ಕಂಡಿದ್ದೀನಿ. ಅಧಿಕಾರಿಗಳಿಗೆ ಅವರ ಕರ್ತವ್ಯವನ್ನು ನೆನಪಿಸಬೇಕಾಗಿರುವುದು ವಿಷಾದಕರ. ದಯವಿಟ್ಟು ಈ ಕಡೆ ತಕ್ಷಣ ಗಮನಿಸಿ” ಎಂದು ಟ್ವೀಟ್ ಮಾಡಿರುವ ಕರ್ತವ್ಯ ಮರೆತ ಸಂಬಂಧಪಟ್ಟ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.
ಬೆಂಗಳೂರಿನ ಹಲನಾಯಕನಹಳ್ಳಿ, ಕಸವನಹಳ್ಳಿ, ದೊಡ್ಡಕನ್ನೇಲಿ, ಜುನ್ನಸಾಂದ್ರ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಮಳೆಯಿಂದ ಇದ್ದ ರಸ್ತೆಯೂ ಕೊಚ್ಚಿ ಹೋಗಿದ್ದು, ಬಿಬಿಎಂಪಿ ಮಾತ್ರ ಗಡತ್ ನಿದ್ರೆಯಲ್ಲಿದೆ. ಇದು ಪ್ರಿಯಾರ ಕೋಪಕ್ಕೆ ಕಾರಣ.

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...