ರಾಜೀನಾಮೆ ಅಂಗೀಕಾರ ನಿರ್ಧಾರದ ಬಳಿಕ ಅಂದಿನ ನಿಲುವೇನೆಂಬುದನ್ನು ಸ್ಪಷ್ಟಪಡಿಸುತ್ತೇವೆ. ಅನರ್ಹತೆ ಬಗ್ಗೆ ನಮಗೆ ಯಾವುದೇ ಭಯವಿಲ್ಲ. ಸುಪ್ರೀಂಕೋರ್ಟ್ ಮತ್ತು ಸ್ಪೀಕರ್ ಅವರ ಮೇಲೆ ನಂಬಿಕೆ ಇದೆ. ಮೂರ್ನಾಲ್ಕು ದಿನಗಳಲ್ಲಿ ಎಲ್ಲವೂ ಬಗೆಹರಿಯಲಿದೆ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರದ ವಿರುದ್ಧ ನಮ್ಮ ಅಸಮಾಧಾನವಿತ್ತು. ಅದನ್ನು ವಿರೋಧಿಸಿ ನಾವು ರಾಜೀನಾಮೆ ನೀಡಿದೆವು.ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಉಮೇಶ್ ಜಾಧವ್ ಅವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದರು. ಅದೇ ರೀತಿ ನಮ್ಮ ರಾಜೀನಾಮೆಯನ್ನೂ ಕೂಡ ಅಂಗೀಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಯುದ್ಧಕ್ಕೆ ಇಳಿದ ಮೇಲೆ ಎಲ್ಲವನ್ನೂ ಎದುರಿಸಬೇಕು. ಎಲ್ಲಿಯವರೆಗೆ ರಾಜೀನಾಮೆ ಅಂಗೀಕಾರವಾಗುವುದಿಲ್ಲವೋ ಅಲ್ಲಿಯವರೆಗೆ ನಾವು ಯಾವುದೇ ರಾಜಕೀಯ ನಿರ್ಣಯ ತೆಗೆದುಕೊಳ್ಳುವುದಿಲ್ಲ ಎಂದರು.