ಹೊಸ ಸರ್ಕಾರ ರಚಿಸಲು ರಾಜ್ಯ ಬಿಜೆಪಿ ನಾಯಕರು ತರಾತುರಿಯಲ್ಲಿ ಪ್ರಯತ್ನ ನಡೆಸಿದರೂ ಅದಕ್ಕೆ ಪಕ್ಷದ ಕೇಂದ್ರ ನಾಯಕರು ತಣ್ಣೀರೆರಚಿದ್ದಾರೆ.
ಮೈತ್ರಿ ಸರ್ಕಾರ ಪತನಗೊಂಡು ಎರಡು ದಿನಗಳು ಕಳೆಯುತ್ತಾ ಬಂದರೂ ಬಿಜೆಪಿ ಕೇಂದ್ರ ನಾಯಕರು ಸರ್ಕಾರ ರಚನೆಗೆ ಯಾವುದೇ ಸೂಚನೆ ನೀಡದಿರುವುದು ರಾಜ್ಯ ನಾಯಕರನ್ನು ಕಂಗಾಲಾಗಿಸಿದೆ. ಹೊಸ ಸರ್ಕಾರ ರಚನೆಗೆ ಮುಂದಾಗುವುದರ ಬದಲು ಮಧ್ಯಂತರ ಚುನಾವಣೆಗೆ ಹೋಗುವುದೇ ಸೂಕ್ತ ಎಂಬ ಚಿಂತನೆ ಕೇಂದ್ರ ನಾಯಕರಲ್ಲಿದ್ದು, ಇದರಿಂದಾಗಿ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.