ವಿಜಯ್ ದೇವರಕೊಂಡ… ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಈ ಟಾಲಿವುಡ್ ಸೆನ್ಸೇಷನಲ್ ಸ್ಟಾರ್? ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ದೇವರಕೊಂಡ ಕನ್ನಡತಿ ರಶ್ಮಿಕಾ ಮಂದಣ್ಣ ಜೊತೆ ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ಲಿಪ್ ಲಾಕ್ ಮಾಡಿದ್ದಲ್ಲಿದಂತೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕನ್ನಡ ಸೋಶಿಯಲ್ ಮೀಡಿಯಾ ಸೈಟ್ ಗಳಲ್ಲೂ..!
ಈ ಟಾಪ್ ನಟ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿಯುವ ಮಾತಾಡಿದ್ದಾರೆ. ನಿವೃತ್ತಿ ಬಗ್ಗೆ ತುಟಿ ಬಿಚ್ಚಿದ್ದಾರೆ. ಇದನ್ನು ಯಾರೋ ಹೇಳಿದ್ದಲ್ಲ.. ಬದಲಾಗಿ ಅವರೇ ಹೇಳಿರುವ ಮಾತಿದು.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಆ ಸಂದರ್ಶನದಲ್ಲಿ ನಿವೃತ್ತಿ ಬಗ್ಗೆ ಕೇಳಿದ್ದಕ್ಕೆ ಮುಕ್ತವಾಗಿ ಮಾತನಾಡಿದ ದೇವರಕೊಂಡ, ಸಿನಿಮಾ ಬಿಟ್ಟು ಜೀವನಕ್ಕೆ ಏನಾದರೂ ಮಾಡ್ಬಹುದು ಅಂತ ಅನಿಸಿದಾಗ ಸಿನಿಮಾ ರಂಗದಿಂದ ನಿವೃತ್ತಿ ಹೊಂದುವೆ ಎಂದಿದ್ದಾರೆ. ಸಿನಿಮಾ ಸಾಕೆನಿಸಿದಾಗ ಬೇರೆ ಯೋಚನೆಯನ್ನು ಮಾಡಬಹುದು ರೊಮ್ಯಾಂಟಿಕ್ ಹೀರೋ ದೇವರಕೊಂಡ.
ಸಿನಿಮಾಗಳಲ್ಲಿನ ಕಿಸ್ಸಿಂಗ್ ಸೀನ್ ಗಳ ಕುರಿತು, ಕಿಸ್ಸಿಂಗ್ ದೃಶ್ಯ ಮಾಡುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಸೆಟ್‌ನಲ್ಲಿ ತುಂಬಾ ಜನ ಇರುತ್ತಾರೆ. ಅವರೆದುರು ನಟ ಹಾಗೂ ನಟಿ ಕಿಸ್ ಮಾಡಲು ಕಂಫರ್ಟಬಲ್ ಸಿಚ್ಯುವೇಷನ್ ಇರಬೇಕು. ನಮಗೆ ಕಷ್ಟವಾದರೆ ಪ್ರೇಕ್ಷಕರಿಗೆ ನೋಡಲೂ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ ವಿಜಯ್.
ಇನ್ನು ತಮ್ಮ ಮದ್ವೆ ವಿಚಾರವಾಗಿ ಮಾತಾಡಿರುವ ಅವರು, ಇನ್ನು 5 ವರ್ಷದೊಳಗೆ ಮದ್ವೆ ಆಗೋ ಪ್ಲಾನ್ ಇದೆ. ಅಂದ್ರೆ ನಂಗೆ 35 ವರ್ಷವಾಗುವುದರೊಳಗೆ ಮದ್ವೆ ಆಗ್ತೀನಿ ಅಂದಿದ್ದಾರೆ.