ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್ ಇಂದು ಬಹುಮತ ಸಾಬೀತುಪಡಿಸುತ್ತೇವೆ. ಏನೂ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ಬಹುಮತ ಕೊಟ್ಟಿದ್ದರು. ಆದರೆ ಮೂರನೇ ಸ್ಥಾನದಲ್ಲಿದ್ದವರು ಮೊದಲ ಸ್ಥಾನಕ್ಕೆ ಬಂದರು. ಇದು ರಾಜ್ಯದ ದುರಂತ. ಈ ದುರಂತ ದೂರವಾಗಿ ಒಳ್ಳೆಯ ದಿನಗಳು ಬರಲಿವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದ್ದಾರೆ.
ಸ್ಪೀಕರ್ ದ್ವೇಷದ ತೀರ್ಪು ಕೊಟ್ಟಿದ್ದು ಒಳ್ಳೆಯದಲ್ಲ ಯಾರ ಒತ್ತಡದಿಂದ ಹೀಗೆ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಅವರು ಯೋಚನೆ ಮಾಡಿ ತೀರ್ಪು ನೀಡಬೇಕಿತ್ತು. ತೀರ್ಪು ನೀಡುವಲ್ಲಿ ಸ್ಪೀಕರ್ ಎಡವಿದ್ದಾರೆ ಎಂದು ದೂರಿದ್ದಾರೆ