ಹೆಡ್ ಲೈನ್ ನೋಡಿದಾಗಲೇ ಗೊತ್ತಾಗಿರಬಹುದು..ಇದು ಕೆಂಪೇಗೌಡ ಮತ್ತು ಕುರುಕ್ಷೇತ್ರ ಸಿನಿಮಾಕ್ಕೆ ಸಂಬಂಧಿಸಿದಂತಹ ಸುದ್ದಿ ಅಂತ..! ಹೀಗಂತ ಯೋಚ್ನೆ ಮಾಡಿದ್ದರೆ ನಿಮ್ಮ ಊಹೆ ಸರಿಯಾಗಿಯೇ ಇದೆ ಎಂದು..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9ಕ್ಕೆ ರಿಲೀಸ್ ಆಗುತ್ತದೆ. ಅದೇ ದಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಕೂಡ ಅಖಾಡಕ್ಕೆ ಇಳಿಯಲಿದೆ ಎಂಬ ಚರ್ಚೆಗಳು ಆರಂಭದಲ್ಲಿ ಕೇಳಿ ಬಂದಿದ್ದವು. ಆದರೆ. ಪೈಲ್ವಾನ್ ರಿಲೀಸ್ ಡೇಟ್ ಸಿಕ್ಕಾಪಟ್ಟೆ ಮುಂದೂಡಲ್ಪಟ್ಟಿತು. ಕುರುಕ್ಷೇತ್ರ ಒಂದು ವಾರ ಮೊದಲು ಅಂದರೆ ಆಗಸ್ಟ್ 2ಕ್ಕೆ ರಿಲೀಸ್ ಆಗುವುದು ಎಂದು ಡಿಸೈಡ್ ಆಯ್ತು.
ಹೀಗಾಗಿ ಕೋಮಲ್ ಅಭಿನಯದ ಕೆಂಪೇಗೌಡ-2 ಅನ್ನು ಆಗಸ್ಟ್ 9ಕ್ಕೆ ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು. ಕೋಮಲ್ 3 ವರ್ಷಗಳ ಬಳಿಕ ಬರ್ತಿರುವ ಕೆಂಪೇಗೌಡ-2 ಗೆ ಕುರುಕ್ಷೇತ್ರದ್ದೇ ತಲೆನೋವಾಗಿದೆ. ಈ ಬಗ್ಗೆ ಸ್ವತಃ ಕೋಮಲ್ ಅವರೇ ಅಳಲನ್ನು ತೋಡಿಕೊಂಡಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕೋಮಲ್, ನಾನಾಗಿಯೇ ಹುಡ್ಕೊಂಡು ಹೋಗಿ ಅವರ ಗಾಡಿ ಹತ್ರ ಹೋಗಿ ಬಿದ್ದಿದ್ರೆ ಅದು ನನ್ನ ತಪ್ಪು ಆಗುತ್ತಿತ್ತು. ಆದರೆ ಈಗ ಫುಟ್ಪಾತ್ನಲ್ಲಿ ನಡ್ಕೊಂಡು ಹೋಗ್ತಿದ್ದ ನಂಗೆ ಅವರಾಗೆ ಬಂದು ಹಿಂದೆಯಿಂದ ಗುದ್ದಿದ್ದಾರೆ ಎಂದಿದ್ದಾರೆ.
ದರ್ಶನ್ ಜೊತೆಗೆ ನಾನು ‘ದತ್ತ’, ‘ಗಜ’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೆ. ಈಗ ಅವರಂಥಾ ದೊಡ್ಡ ಸ್ಟಾರ್ ಮುಂದೆ ನಾನು ಸ್ಪರ್ಧಿಸಬೇಕಾಗಿದೆ. ಅದಲ್ಲದೇ ಒಂದು ವಾರದ ನಂತರ ‘ಸಾಹೋ’ ಸಿನಿಮಾ ಬಿಡುಗಡೆಯಾಗಲಿದೆ. ಅತ್ತ ‘ಕುರುಕ್ಷೇತ್ರ’ ಇತ್ತ ‘ಸಾಹೋ’ ಈ ನಡುವೆ ನಾನೇ ನಿರ್ಮಿಸಿ ನಟಿಸಿರುವ ‘ಕೆಂಪೇಗೌಡ2’..! ಆದರೂ ಪರವಾಗಿಲ್ಲ. ಯಾವ ಸಿನಿಮಾ ಇಷ್ಟವಾಗುತ್ತಾ ಆ ಸಿನಿಮಾವನ್ನು ಜನ ನೋಡಲಿ. ದರ್ಶನ್ ಅವರ ಸಿನಿಮಾವನ್ನೇ ಜನ ಮೊದಲು ನೋಡಿ ಆಮೇಲೆ ನನ್ನ ಸಿನಿಮಾ ನೋಡಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.