ಯಡಿಯೂರಪ್ಪನವರಿಗೆ ಪ್ರತಿ ತಿಂಗಳು 4 ಲಕ್ಷ 697 ರೂಪಾಯಿ ಸಿಗಲಿದೆ.ಇತರೆ ಭತ್ಯೆ ರೂಪದಲ್ಲಿ 18 ಲಕ್ಷ 14 ಸಾವಿರದ 709 ರೂಪಾಯಿ ಪ್ರತ್ಯೇಕವಾಗಿ ಸಿಗಲಿದೆ.
ಕರ್ನಾಟಕದ ಪ್ರತಿಯೊಬ್ಬ ಶಾಸಕರಿಗೆ ಪ್ರತಿ ತಿಂಗಳು 25 ಸಾವಿರ ರೂಪಾಯಿ ಸಂಬಳ ಸಿಗುತ್ತದೆ. ದೂರವಾಣಿ ಬಿಲ್ ಗೆಂದು 20 ಸಾವಿರ ಪ್ರತ್ಯೇಕವಾಗಿ ಸಿಗುತ್ತದೆ. ಕ್ಷೇತ್ರದ ಭತ್ಯೆ ಹೆಸರಿನಲ್ಲಿ 40 ಸಾವಿರ ರೂಪಾಯಿ ಸಿಗುತ್ತದೆ. ಪೋಸ್ಟ್ ಖರ್ಚಿಗಾಗಿ 5 ಸಾವಿರ ರೂಪಾಯಿ ಸಿಗುತ್ತದೆ. ಪಿಎ ಹಾಗೂ ರೂಮ್ ಬಾಯ್ ಗೆ ನೀಡಲು 10 ಸಾವಿರ ರೂಪಾಯಿ ಅಂದ್ರೆ ಒಟ್ಟು 1 ಲಕ್ಷ ರೂಪಾಯಿ ಸಿಗುತ್ತದೆ. ಇದಲ್ಲದೆ ಪ್ರಯಾಣ ಭತ್ಯೆ ಹೆಸರಿನಲ್ಲಿ 40 ಸಾವಿರ ರೂಪಾಯಿ ಸಿಗುತ್ತದೆ,
ಇಷ್ಟೇ ಅಲ್ಲದೆ ಸಭೆಯಲ್ಲಿ ಪಾಲ್ಗೊಂಡ್ರೆ, ಹೊಟೇಲ್ ನಲ್ಲಿ ತಂಗಿದ್ರೆ, ಪ್ರಯಾಣಕ್ಕೆ ಹೀಗೆ ಬೇರೆ ಬೇರೆ ಕೆಲಸಕ್ಕೆ ಪ್ರತ್ಯೇಕ ಹಣ ಸಿಗುತ್ತದೆ. ಕರ್ನಾಟಕದ ಯಾವುದೇ ಶಾಸಕ ಕಾರು ಖರೀದಿ ಮಾಡಿದ್ರೆ 15 ಲಕ್ಷದವರೆಗೆ ಸಾಲ ಸಿಗುತ್ತದೆ. ಶೇಕಡಾ 7ರಷ್ಟು ಬಡ್ಡಿ ದರದಲ್ಲಿ ಈ ಸಾಲ ಸಿಗುತ್ತದೆ. ಸಾಲ ಮೊತ್ತ ಹಾಗೂ ಬಡ್ಡಿ ತೀರಿಸುವ ಮೊದಲೇ ಶಾಸಕರು ಸಾವನ್ನಪ್ಪಿದ್ರೆ ಸಾಲ, ಬಡ್ಡಿ ಮನ್ನಾ ಮಾಡಲಾಗುವುದು.