ಚಾಲೆಂಜ್ ಸ್ಟಾರ್ ದರ್ಶನ್ ಅಭಿನಯಿಸಿರುವ ಕನ್ನಡದ ಬಹು ನಿರೀಕ್ಷಿತ, ಬಹು ದೊಡ್ಡ ಬಜೆಟ್ ನ ಸಿನಿಮಾ ಕುರುಕ್ಷೇತ್ರ ರಿಲೀಸ್ ಗೆ ರೆಡಿಯಾಗಿದೆ. ಕುರುಕ್ಷೇತ್ರ ಸೆಟ್ಟೇರಿದಲ್ಲಿಂದಲೂ ಸದ್ದು ಮಾಡುತ್ತಿರುವ ಸಿನಿಮಾ. ಚಾಲೆಂಜ್ ಸ್ಟಾರ್ ದರ್ಶನ್ ಮಾತ್ರವಲ್ಲದೆ ರೆಬೆಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ಕ್ರೇಜಿಸ್ಟಾರ್ ರವಿಚಂದ್ರನ್, ಶಶಿಕುಮಾರ್, ರವಿಶಂಕರ್, ಸೋನು ಸೂದ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದೊಡ್ಡದಾದ ತಾರಗಣ ಕುರುಕ್ಷೇತ್ರದಲ್ಲಿದೆ.
ಆಗಸ್ಟ್ 9 ಕ್ಕೆಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಪಂಚ ಭಾಷೆಗಳಲ್ಲಿ ಕುರುಕ್ಷೇತ್ರ ಅಬ್ಬರಿಸಲಿದೆ. ಇದೇ ದಿನ ಕೆಂಪೇಗೌಡ 2 ಮತ್ತು ಗಿಮಿಕ್ ಕೂಡ ತೆರೆಗೆ ಬರಲಿದೆ. ಈ ಎಲ್ಲದರ ನಡುವೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ರೋರಿಂಗ್ ಸ್ಟಾರ್ ಶ್ರೀಮುರಳಿ ಸಹ ಸರ್ ಪ್ರೈಸ್ ಕೊಡಲಿದ್ದಾರೆ.
ಪ್ರಜ್ವಲ್ ಮತ್ತು ಮುರಳಿ ಸಿನಿಮಾಗಳು ಬರುತ್ತಿಲ್ಲ. ಬದಲಾಗಿ ಟೀಸರ್ ಮತ್ತು ಹಾಡು ಗಿಫ್ಟ್ ರೂಪದಲ್ಲಿ ಆಗಸ್ಟ್ ನಲ್ಲಿ ಅಭಿಮಾನಿಗಳಿಗೆ ಸಿಗಲಿದೆ.
ಆಗಸ್ಟ್ 2 ರಂದು ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.ಇದು ಲಕ್ಕಿ ಶಂಕರ್ ನಿರ್ದೇಶನದ ಸಿನಿಮಾ.
ಇನ್ನು ಕುರುಕ್ಷೇತ್ರ ರಿಲೀಸ್ ಆಗುವ ಆಗಸ್ಟ್ 9 ,ರಂದು ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಭರಾಟೆ ಸಿನಿಮಾದ ಹಾಡು ರಿಲೀಸ್ ಆಗುತ್ತಿದೆ. ಭರಾಟೆ ಚೇತನ್ ಕುಮಾರ್ ನಿರ್ದೇಶನದ ಸಿನಿಮಾ.
ಒಟ್ಟಿನಲ್ಲಿ ಆಗಸ್ಟ್ ನಲ್ಲಿ ಭರಪೂರ ಸಿನಿರಂಜನೆ….ಸ್ಯಾಂಡಲ್ ವುಡ್ ಪ್ರಿಯರಿಗೆ…
ದರ್ಶನ್ ಜೊತೆಗೆ ಪ್ರಜ್ವಲ್ , ಮುರಳಿ ಅಖಾಡಕ್ಕೆ…!
Date: