ಸಿದ್ಧಾರ್ಥ್ ಕಾಣೆಯಾದ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿವಾಸಕ್ಕೆ ದೌಡಾಯಿಸಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಭಾನುವಾರದಂದು ಸಿದ್ದಾರ್ಥ್ ತಮಗೆ ಕರೆ ಮಾಡಿದ್ದು, ಭೇಟಿಯಾಗಬೇಕೆಂದು ಹೇಳಿದ್ದರು. ಇದೀಗ ಅವರ ನಾಪತ್ತೆಯಾಗಿರುವ ವಿಚಾರ ತಿಳಿದು ಆತಂಕವಾಗಿದೆ. ಅವರು ಸುರಕ್ಷಿತವಾಗಿ ಮರಳಿ ಬರುವ ವಿಶ್ವಾಸವಿದೆ ಎಂದಿದ್ದರು.ಆದರೆ ಸಿದ್ಧಾರ್ಥ್ ನೇತ್ರಾವತಿ ನದಿ ನೀರಿನಲ್ಲಿ ಇಂದು ಶವವಾಗಿ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ, ಆತ್ಮೀಯ ಸ್ನೇಹಿತನ ದುರಂತ ಸಾವಿಗೆ ಡಿ.ಕೆ. ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.