ವೀರಶೈವರು ಹಾಗೂ ಲಿಂಗಾಯಿತರು ಹಿಂದೂಗಳೇ ಆಗಿದ್ದಾರೆ. ಇಬ್ಬರೂ ಬೇರೆಯಲ್ಲ. ಅನೇಕ ಸಂಪ್ರದಾಯಗಳ ಸಮ್ಮಿಲನವೇ ಒಂದು ಹಿಂದೂ ಧರ್ಮ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ. ಚಾತುರ್ಮಾಸ ವ್ರತಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ನನ್ನನ್ನು ವಿಧಾನಸೌಧಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಈಗ ಚಾತುರ್ಮಾಸ ವ್ರತದಲ್ಲಿರು ವುದರಿಂದ ಸೆಪ್ಟೆಂಬರ್ 13ರವರೆಗೆ ಮೈಸೂರಿನಿಂದ ಹೊರಗೆ ಹೋಗುವಂತಿಲ್ಲ. ಮೈಸೂರಿನ ಯಾವು ದಾದರೊಂದು ಸಾರ್ವಜನಿಕ ಸ್ಥಳದಲ್ಲಿ, ಶಾಂತ ವಾತಾವರಣದಲ್ಲಿ ಚರ್ಚೆಗೆ ಸಿದ್ದನಿದ್ದೇನೆ ಎಂದರು.
ವೀರಶೈವರು, ಲಿಂಗಾಯಿತರೆಲ್ಲರೂ ಹಿಂದು ಧರ್ಮದಲ್ಲಿದ್ದೇವೆ.ಶೈವರು, ವೈಷ್ಣವರು ಹಿಂದೂಗಳಲ್ಲದಿದ್ದರೆ ಯಾರು ಹಿಂದುಗಳು ಎಂದು ಶ್ರೀಗಳು ಪ್ರಶ್ನಿಸಿ, ಶಿವನೇ ಸರ್ವೋತ್ತಮ, ಶಿವನ ಪಂಚಾಕ್ಷರಿ ಮಂತ್ರಗಳನ್ನು ಎಲ್ಲರೂ ಜಪಿಸುತ್ತಾರೆ. ಶಿವನನ್ನು ಒಪ್ಪಿದ ಮೇಲೆ ಹಿಂದುಗಳಲ್ಲ ಎಂದು ಹೇಳಲು ಸಾಧ್ಯವೇ ಎಂದರು.