ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್… ಸ್ಯಾಂಡಲ್ವುಡ್ನ ‘ಮಹಾರಾಜ’..! ನಟನೆ ಮಾತ್ರವಲ್ಲದೆ ನಿರ್ದೇಶನದಲ್ಲೂ ‘ಸೈ’ ಅನಿಸಿಕೊಂಡಿರುವ ಕನ್ನಡ ನಾಡಿನ ‘ಮಾಣಿಕ್ಯ’..! ಚಂದನವನದ ‘ರನ್ನ’ ಟಾಲಿವುಡ್, ಬಾಲಿವುಡ್ ನಲ್ಲಿ ಗುರುತಿಸಿಕೊಂಡು ‘ಈಗ’ ಹಾಲಿವುಡ್ಡನ್ನೂ ‘ಸ್ಪರ್ಶಿ’ಸಿದ್ದಾರೆ. ಸುದೀಪ್ ಗೆ ಇವತ್ತು ವಿಶ್ವಮಟ್ಟದಲ್ಲಿ ಅಭಿಮಾನಿಗಳಿದ್ದಾರೆ.
ಸುದೀಪ್ ಸೆಪ್ಟೆಂಬರ್ 12ಕ್ಕೆ ಪೈಲ್ವಾನ್ ಅವತಾರದಲ್ಲಿ ದರ್ಶನ ಕೊಡುತ್ತಿದ್ದಾರೆ. ಕೋಟಿಗೊಬ್ಬ 3 ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಕಿಚ್ಚ ಸಲ್ಮಾನ್ ಖಾನ್ ನಟನೆಯ ದಬಂಗ್ 3ನಲ್ಲಿ ನಟಿಸ್ತಾ ಇದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ನ ಮತ್ತೊಬ್ಬ ಸ್ಟಾರ್ ಅರ್ಬಾಜ್ ಖಾನ್ ಕೂಡ ಅಭಿನಯಿಸುತ್ತಿದ್ದಾರೆ. ಪ್ರಭುದೇವ್ ನಿರ್ದೇಶನದ ಈ ಸಿನಿಮಾ ಬಹು ದೊಡ್ಡ ತಾರಗಣವನ್ನು ಹೊಂದಿದ್ದು, ಸಿನಿಮಾ ಮೇಲೆ ನಿರೀಕ್ಷೆ ಬಹಳಷ್ಟಿದೆ. ಈ ಸಿನಿಮಾದಲ್ಲಿ ಸುದೀಪ್ ನಟನೆಗೆ ಅರ್ಬಾಜ್ ಖಾನ್ ಫಿದಾ ಆಗಿದ್ದಾರೆ. ಸುದೀಪ್ ಅಭಿನಯವನ್ನು ಅವರು ಕೊಂಡಾಡಿದ್ದಾರೆ.
ದಬಂಗ್-3 ಸಿನಿ ದಕ್ಷಿಣ ಭಾರತದ ಸ್ಟಾರ್ ಸುದೀಪ್ ಅವರ ಪಾತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರಕ್ಕೆ ಸುದೀಪ್ ಆಯ್ಕೆ ಪರ್ಫೆಕ್ಟ್..! ಎಲ್ಲಾ ಉಳಿದ ಕ್ಯಾರೆಕ್ಟರ್ಗಿಂತ ಸುದೀಪ್ ಪಾತ್ರ ಸೆಳೆಯುವಂತಿದೆ ಎಂದಿದ್ದಾರೆ ಅರ್ಬಾಜ್ ಖಾನ್. ಪ್ರತಿಯೊಬ್ಬ ಪ್ರೇಕ್ಷಕನೂ ಸುದೀಪ್ ಅವರ ಪಾತ್ರವನ್ನ ಇಷ್ಟಪಡುತ್ತಾರೆ ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ಸುದೀಪ್ ಹವಾ ಜೋರಾಗಿದೆ ಬಿಡಿ. ಇಂಥಾ ನಟ ನಮ್ಮ ಕನ್ನಡದವರಾಗಿರುವುದು ಎಲ್ಲರ ಹೆಮ್ಮೆ.