ಕುರುಕ್ಷೇತ್ರ ಸಿನಿಮಾದ ಪ್ರೆಸ್ಮೀಟ್ನಲ್ಲಿ ದರ್ಶನ್ ಆಡಿರುವ ಎಲ್ಲಾ ಮಾತುಗಳಿಗಿಂತ ಹೆಚ್ಚು ಸೌಂಡು ಮಾಡುತ್ತಿರುವುದು ಸುದೀಪ್ ಬಗ್ಗೆ ಕೇಳಿದ್ದಕ್ಕೆ ದರ್ಶನ್ ಕೊಟ್ಟ ಉತ್ತರದ ಆ ಮಾತುಗಳು..!
ವಿಷ್ಣುವರ್ಧನ್, ಅಂಬರೀಶ್ ಇದ್ದಂಗೆ ಸುದೀಪ್ ಮತ್ತು ದರ್ಶನ್ ಇರಬೇಕು ಅನ್ನೋದು ಎಲ್ಲರ ಆಸೆ. ಸುದೀಪ್ ಅವರನ್ನು ಕೇಳಿದಾಗಲೆಲ್ಲಾ.. ಮುಂದೆ ಒಳ್ಳೇದಾಗುತ್ತೆ.. ಅವನು ನನ್ನ ಗೆಳೆಯನೇ ಮನಸ್ಸಲ್ಲಿದ್ದಾನೆ ಅಂತ ಹೇಳುತ್ತಾರೆ. ಆದರೆ, ಈ ಪ್ರಶ್ನೆಯನ್ನು ಬರೀ ಸುದೀಪ್ ಅವರಿಗೇ ಏಕೆ ಕೇಳ್ತೀರಾ? ದರ್ಶನ್ ಅವರಿಗೂ ಕೇಳಿ ಎಂದು ಜನ ಕೇಳ್ತಿದ್ದಾರೆ ಎಂದು ರಿಪೋರ್ಟರ್ ಒಬ್ಬರು ಕೇಳಿದಾಗ… ದರ್ಶನ್ ಸ್ವಲ್ಪ ಖಾರವಾಗಿಯೇ ಇರುವಂತೆ ಉತ್ತರ ನೀಡಿದರು. ಆದರೆ, ಅದು ದರ್ಶನ್ ಮಾತಿನ ಶೈಲಿಯಷ್ಟೇ.. ದರ್ಶನ್ ಕೋಪ ಮಾಡಿಕೊಂಡಿಲ್ಲ.. ಬದಲಾಗಿ ವೈಯಕ್ತಿಕ ವಿಚಾರ ಬೇಡ ಎಂದು ಹೇಳಿದರಷ್ಟೇ..!
ಸುದೀಪ್ ಬಗ್ಗೆ ಕೇಳಿದ್ದಕ್ಕೆ. ”ಇನ್ಮೇಲೆ ದರ್ಶನ್ ಬೆಳಗ್ಗೆ ಎಷ್ಟೊತ್ತಿಗೆ ಎದ್ದೇಳ್ಬೇಕು? ಯಾರ್ ಫೋನ್ ಎತ್ತ್ ಬೇಕು ಎತ್ ಬಾರದು? ಯಾರ್ ಫ್ರೆಂಡ್ಶಿಪ್ ಮಾಡ್ಬೇಕು ಮಾಡ್ಬಾರ್ದು, ರಾತ್ರಿ ಅವ್ನ ಹೆಂಡ್ತಿ ಪಕ್ಕ ಮಲಗ್ಬುದಾ? ಮಲ್ಗಬಾರ್ದಾ? ಚಾನಲ್ ನೀವ್ ಡಿಸೈಡ್ ಮಾಡ್ತೀರಮ್ಮಾ, ನಮ್ ವೈಯಕ್ತಿಕ ಅಲ್ವಾ.. ಅದು ನಮ್ಗೆ ಗೊತ್ತು” ಅಂತ ಹೇಳಿದರು..!
ದರ್ಶನ್ ಈ ಮಾತನ್ನು ಅಹಂಕಾರದಿಂದ ಹೇಳಿದಂತಿದೆ ನಿಜ.. ಆದರೆ ದರ್ಶನ್ ಅಂಥಾ ವ್ಯಕ್ತಿಯಲ್ಲ.. ಅವರು ಸಹಜವಾಗಿಯೇ ಹಾಗೆ ಹೇಳಿದರಷ್ಟೇ..!
ದರ್ಶನ್ ಮತ್ತು ಸುದೀಪ್ ಸ್ನೇಹಿತರಾಗಿ ಉಳಿಯಬೇಕು ಎನ್ನುವುದು ಇಬ್ಬರ ಅಭಿಮಾನಿಗಳ ಆಶಯ ಕೂಡ. ಸುದೀಪ್ ತಾಳ್ಮೆ ಜಾಸ್ತಿ.. ದರ್ಶನ್ ಹಠ ಜಾಸ್ತಿಯಷ್ಟೇ..ಅದು ಪಾಸಿಟಿವ್ ಆ್ಯಂಗಲ್ ನಲ್ಲೇ ನೋಡಬೇಕು.. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಯಾರಿದಂಲೂ ಆಗಬಾರದು.