ಕುರುಕುಂದಾ ಸರಕಾರಿ ಪದವಿ ಪೂರ್ವ ಕಾಲೇಜಗೆ ಉಪನ್ಯಾಸಕರು ಇಲ್ಲಾ ಎಂದು ಆರೋಪಿಸಿ ಕಾಲೇಜ ವಿದ್ಯಾರ್ಥಿಗಳು ಮಂಗಳವಾರ ಸಿರವಾರ-ಹಟ್ಟಿ ಮುಖ್ಯರಸ್ತೆ ತಡೆಮಾಡಿ, ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಮೂಲಕ ಪ್ರತಿಭಟನೆ ಮಾಡಿದರು.
ಕಾಲೇಜ ಆರಂಭವಾಗಿ 2ತಿಂಗಳು ಕಳೆದರು ವಿಷಯವಾರು ಉಪನ್ಯಾಸಕರು ಇಲ್ಲಾ, ಕಟ್ಟಡ ಇಲ್ಲಾ, ಸರಿಯಾದ ಸೌಲಭ್ಯವಿಲ್ಲಾ, ಪರೀಕ್ಷೆ ಯಲ್ಲಿ ಉತ್ತಮ ಅಂಕಪಡೆಯುವುದು ಹೇಗೆ ಎಂದು ವಿದ್ಯಾರ್ಥಿಗಳು ತಮ್ಮ ನೋವು ತೋಡಿಕೊಂಡರು. ಒಬ್ಬರೇ ಉಪನ್ಯಾಸಕರು ಇದ್ದಾರೆ.ಅಭ್ಯಾಸಕ್ಕೆ ತೊಂದರೆಯಾಗಿದೆ ಕೂಡಲೇ ಖಾಯಂ ಉಪನ್ಯಾಸಕರನ್ನು ನೀಡಬೇಕು ಎಂದು ಪ್ರತಿಭಟಿಸಿದರು. ಪ್ರತಿಭಟನೆ ವಿಷಯ ತಿಳಿದು ಜಿಲ್ಲಾ ಉಪನಿರ್ದೇಶಕ ಸಿ.ಟಿ.ಕಲ್ಲಯ್ಯ ದೂರವಾಣಿ ಮೂಲಕ 2ದಿನದಲ್ಲಿ ಅತಿಥಿ ಉಪನ್ಯಾಸಕರು ಬರುತ್ತಾರೆ ಎಂದು ತಿಳಿಸಿದರು.
“ನಮಗೆ ಶಿಕ್ಷಕರು ಬೇಕು ” ವಿದ್ಯಾರ್ಥಿಗಳಿಂದ ರಸ್ತೆ ತಡೆ, ಟೈರಿಗೆ ಬೆಂಕಿ !?
Date: