ಕುರುಕ್ಷೇತ್ರದ ಬಗ್ಗೆ ಸುಮಲತಾ ಶಾಕಿಂಗ್ ಹೇಳಿಕೆ..! ಇದರ ಅಸಲಿಯತ್ತೇ ಬೇರೆ..!

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಿದೆ. ಸೆಟ್ಟೇರಿದಲ್ಲಿಂದಲೂ ಸೌಂಡು ಮಾಡಿದ್ದ ಈ ಸಿನಿಮಾ ನಿರೀಕ್ಷೆಗೂ ಮೀರಿ ಅಬ್ಬರಿಸುತ್ತಿದೆ.
ಹಿಂದೆ ಸಂಗೊಳ್ಳಿ ರಾಯಣ್ಣನ ಪಾತ್ರಕ್ಕೆ ಜೀವ ತುಂಬಿ ಸಂಗೊಳ್ಳಿ ರಾಯಣ್ಣನ ದರ್ಶನ ನೀಡಿದ್ದ ದರ್ಶನ್ ಈ ಬಾರಿ ದುರ್ಯೋಧನನ ಪಾತ್ರವನ್ನು ತಾನೇ ದುರ್ಯೋಧನ ಎನ್ನುವಂತೆ ನಟಿಸಿದ್ದಾರೆ. ಡಿ.ಬಾಸ್ ದುರ್ಯೋಧನ ಬಾಸ್​ ಆಗಿದ್ದಾರೆ. ದಶರ್ನ್ ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿದೆ.
ಸಿನಿಮಾವನ್ನು ನೋಡಿರುವ ಗಣ್ಯರಲ್ಲಿ ಸುಮಲತಾ ಅಂಬರೀಶ್​ ಕೂಡ ಒಬ್ಬರು. ದರ್ಶನ್ ಅವರೊಡನೆ ಕುರುಕ್ಷೇತ್ರ ನೋಡಿದ ಸುಮಲತಾ ಸುದ್ದಿಗಾರರೊಂದಿಗೆ ಮಾತನಾಡಿದರು. ಸುಮಲತಾ ಅವರ ಮೊದಲ ಪ್ರಕ್ರಿಯೆಯೇ ಶಾಕಿಂಗ್ ಆಗಿದೆ..! ಕುರುಕ್ಷೇತ್ರ ಸಿನಿಮಾವೇ ಅಲ್ಲ ಎಂದಿದ್ದಾರೆ.
ಅಚ್ಚರಿಯಾದ್ರು ಈ ಹೇಳಿಕೆ ಸುಮಲತಾ ನೀಡಿರುವುದು ಸತ್ಯ.. ಆದರೆ ಇದರ ಅಸಲಿಯತ್ತೇ ಬೇರೆ. ದರ್ಶನ್ ಅವರನ್ನು, ಸಿನಿಮಾವನ್ನುಸುಮಲತಾ ಕೊಂಡಾಡಿದ ಪರಿ ಇದು. ಕುರುಕ್ಷೇತ್ರ ಸಿನಿಮಾ ಎಂದರೆ ತಪ್ಪಾಗುತ್ತದೆ. ಅದು ಒಂದು ಪಯಣ, ಜರ್ನಿ.. ಎಕ್ಸ್​ಪಿರಿಯನ್ಸ್, ಅನುಭವ ಎಂದು ಸಂಸದೆ ಸುಮಲತಾ ಬಣ್ಣಿಸಿದ್ದಾರೆ.


ದುರ್ಯೋಧನನೇ ದರ್ಶನ್ ದರ್ಶನ್ನೇ ದುರ್ಯೋಧನ ಎನ್ನುವಂತೆ ದರ್ಶನ್​ ಅಭಿನಯಿಸಿದ್ದಾರೆ. ಇದು ಸಂಗೊಳ್ಳಿ ರಾಯಣ್ಣ ಸಿನಿಮಾ ಬಳಿಕ ದರ್ಶನ್ ಅವರ ಸಿನಿ ಪಯಣದ ಮೈಲುಗಲ್ಲು ಎಂದು ಸುಮಲತಾ ವರ್ಣಿಸಿದ್ದಾರೆ.
ಕುರುಕ್ಷೇತ್ರ ರೆಬೆಲ್ ಸ್ಟಾರ್ ಅಂಬರೀಶ್ ವಿಷಯಕ್ಕೂ ಮುಖ್ಯವಾಗುತ್ತದೆ. ಅಂಬರೀಶ್ ಅವರನ್ನು ಕೊನೆಯ ಸಲ ಬೆಳ್ಳಿ ಪರದೆಯಲ್ಲಿ ನೋಡ ಬಹುದಾದ ಸಿನಿಮಾ ಕುರುಕ್ಷೇತ್ರ. ಈ ಸಿನಿಮಾದಲ್ಲಿ ಅಂಬಿ ಭೀಷ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಶ್ರೀ ಕೃಷ್ಣನಾಗಿ, ಬಾಲಿವುಡ್ ನಟ ಸೋನು ಸೂದ್ ಅರ್ಜುನನಾಗಿ, ನಿಖಿಲ್ ಅಭಿಮನ್ಯವಾಗಿ ನಟಿಸಿದ್ದಾರೆ.

Share post:

Subscribe

spot_imgspot_img

Popular

More like this
Related

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ ಬದಲಾವಣೆ! 

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ...

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ, ಕರೆದಾಗ ನಾನು, ಸಿಎಂ ಇಬ್ಬರೂ ಹೋಗುತ್ತೇವೆ: ಡಿ.ಕೆ. ಶಿವಕುಮಾರ್

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ, ಕರೆದಾಗ ನಾನು, ಸಿಎಂ ಇಬ್ಬರೂ ಹೋಗುತ್ತೇವೆ:...

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ. ದೇವೇಗೌಡರ ಮನವಿ

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ....

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿ.ಕೆ. ಶಿವಕುಮಾರ್ ಮರುಪ್ರಶ್ನೆ

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿ.ಕೆ....