ಸಚಿವ ಸಂಪುಟ ಸದಸ್ಯರ ಪಟ್ಟಿ ಫೈನಲ್ ಮಾಡಲು ಆಗಸ್ಟ್ 16ಕ್ಕೆ ನವದೆಹಲಿಗೆ ಬರುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಯಡಿಯೂರಪ್ಪನವರಿಗೆ ಸೂಚಿಸಿದ್ದು, ಆಗಸ್ಟ್ 15ರಂದು ಧ್ವಜಾರೋಹಣ ನೆರವೇರಿಸಿದ ಬಳಿಕ ಅಂದು ಸಂಜೆಯೇ ಯಡಿಯೂರಪ್ಪ ನವದೆಹಲಿಗೆ ತೆರಳಲಿದ್ದಾರೆ. ಸಚಿವರ ಪಟ್ಟಿ ಅಂತಿಮಗೊಂಡ ಬಳಿಕ ಒಂದೆರಡು ದಿನಗಳಲ್ಲೇ ನೂತನ ಸಚಿವರ ಇದರ ಮಧ್ಯೆ ತಮ್ಮ ಅರ್ಹತೆಯನ್ನು ಪ್ರಶ್ನಿಸಿ 17 ಶಾಸಕರುಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು,
ಈ ಕುರಿತು ನ್ಯಾಯಾಲಯದಿಂದ ಇನ್ನೂ ಯಾವುದೇ ತೀರ್ಮಾನ ಹೊರಬಿದ್ದಿಲ್ಲ. ಹೀಗಾಗಿ ಯಡಿಯೂರಪ್ಪನವರು ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆ ಮಾಡದೆ ಕೆಲವು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಿದ್ದಾರೆಂದು ಹೇಳಲಾಗಿದೆ. ಒಂದೊಮ್ಮೆ ರಾಜೀನಾಮೆ ನೀಡಿರುವ ಶಾಸಕರುಗಳ ಅನರ್ಹತೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದರೆ ಅವರಿಗೆ ಸಚಿವ ಸ್ಥಾನ ನೀಡುವ ಲೆಕ್ಕಾಚಾರ ಇದರ ಹಿಂದಿದೆ.