ನೆರೆ ಸಂತ್ರಸ್ತರ ನೆರವಿಗೆ ಒನ್ ಮ್ಯಾನ್ ಆದ್ಮಿಯಂತೆ ಯಡಿಯೂರಪ್ಪನವರು ಉತ್ತರ ಕರ್ನಾಟಕದ ಎಲ್ಲ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ .
ಇದಕ್ಕೆ ಎಲ್ಲಾ ಪಕ್ಷದ ಮುಖಂಡರುಗಳು ಯಾವುದೇ ರಾಜಕೀಯ ಉದ್ದೇಶವಿಟ್ಟುಕೊಂಡು ಈ ಕೆಲಸವನ್ನು ಮಾಡಬಾರದು ಜನರು ಸಂಕಷ್ಟದಲ್ಲಿದ್ದಾರೆ ಅವರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಹೇಳಿದ್ದಾರೆ . ಮಾಜಿ ಪ್ರಧಾನಿ ದೇವೇಗೌಡ ಅವರು ಕೂಡ ಇದರ ಬಗ್ಗೆ ಮಾತನಾಡಿದರು , ನೆರೆ ಸಂತ್ರಸ್ತರ ನೆರವಿಗೆ ಯಡಿಯೂರಪ್ಪನವರಿಗೆ ನಮ್ಮ ಪಕ್ಷದಿಂದಲೂ ಹಾಗೂ ನಮ್ಮಿಂದಲೂ ಬೆಂಬಲವಿದೆ ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದರು .