ವಿಶ್ವಕಪ್ ಫೈನಲ್ ನಲ್ಲಿ ಓವರ್ ತ್ರೋ ಪ್ರಕರಣದ ತೀರ್ಪು ಕೊನೆಗೆ ನ್ಯೂಝಿಲ್ಯಾಂಡ್ ಕಪ್ ಕಳೆದುಕೊಳ್ಳಲು ಕಾರಣವಾದ ಮೇಲೆ ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಖಂಡನೆ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಶೇನ್ ವಾರ್ನ್, ಕುಮಾರ ಸಂಗಕ್ಕರ ಮತ್ತಿತರರು ಇರುವ ವರ್ಲ್ಡ್ ಕ್ರಿಕೆಟ್ ಕಮಿಟಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪಂದ್ಯದಲ್ಲಿ ತೀರ್ಪುಗಾರರರಾಗಿ ಓವರ್ ತ್ರೋ ಬಗ್ಗೆ ತೀರ್ಪು ನೀಡಿದ್ದ ಕುಮಾರ್ ಧರ್ಮಸೇನ ಕೂಡ ಬಳಿಕ ಆ ತೀರ್ಪಿನಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದರು ಎನ್ನಲಾಗುತಿದೆ .