ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ …ಸ್ಯಾಂಡಲ್ ವುಡ್ ನ ಸ್ಟಾರ್ ನಟರಲ್ಲಿ ಒಬ್ಬರು. ಪುನೀತ್ ಚಿಕ್ಕ ವಯಸ್ಸಿನಲ್ಲಿಯೇ ಅಭಿನಯ ಲೋಕಕ್ಕೆ ಕಾಲಿಟ್ಟ ನಟ. ವರನಟ ಡಾ.ರಾಜ್ ಕುಮಾರ್ ಅವರ ಪುತ್ರ ಆಗಿರುವ ಇವರಿಗೆ ಕಲೆ ರಕ್ತಗತವಾಗಿಯೇ ಬಂದಿದೆ. ಬಾಲ್ಯದಲ್ಲೇ ಪುನೀತ್ ರಾಜ್ ಕುಮಾರ್ ತನ್ನ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದ ನಟ.
ಇಂದು ಪವರ್ ಸ್ಟಾರ್ ಆಗಿ ಚಂದನವನದ ಪವರ್ ಆಗಿ ಬೆಳೆದಿದ್ದಾರೆ.
ಪವರ್ ಸ್ಟಾರ್ ಬಗ್ಗೆ ಸಾಕಷ್ಟು ವಿಚಾರಗಳು ಗೊತ್ತಿದೆ. ಅನೇಕ ವಿಚಾರಗಳು ಗೊತ್ತಿಲ್ಲ. ತಮ್ಮ ನೆಚ್ಚಿನ ನಟರ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳ ಬೇಕು ಎನ್ನುವುದು ಎಲ್ಲಾ ಅಭಿಮಾನಿಗಳಲ್ಲೂ ಇರುತ್ತದೆ. ಪುನೀತ್ ಅವರ ಫೇವರೇಟ್ ಟೀಚರ್ ಯಾರು ಗೊತ್ತಾ? ಪುನೀತ್ ಹಿಂದಿನ ಪವರೇ ಈ ಟೀಚರ್..!
ಪುನೀತ್ ಕನ್ನಡದ ಕೊಟ್ಯಧಿಪತಿ ಶೋ ನಡೆಸಿಕೊಡುತ್ತಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೇ ಶೋನಲ್ಲಿ ಸ್ಪರ್ಧಿಯೊಬ್ಬರ ಜೊತೆ ಮಾತನಾಡುತ್ತ ಪುನೀತ್ ಈ ವಿಷಯವನ್ನು ಹೇಳಿದ್ದಾರೆ.
ನಾನು ಆರಂಭಿಕ ಹಂತದಲ್ಲಿ ಶಿಕ್ಷಣ ಪಡೆದಿರಲಿಲ್ಲ. ಬೆಂಗಳೂರಿಗೆ ಬಂದಾಗ ನನ್ನನ್ನು ಟೂಷನ್ ಗೆ ಸೇರಿಸಿದ್ರು. ನನಗೆ ಆಗ ವಿಜಯ ಲಕ್ಷ್ಮಿ ಎಂಬ ಟೀಚರ್ ಇದ್ರು. ಇಂದು ನಾನಿಲ್ಲಿ ಇರುವುದಕ್ಕೆ ಕಾರಣವೇ ಆ ಟೀಚರ್… ನಾನು ಇಂಗ್ಲಿಷ್ ಮಾತಾಡ್ತೀನಿ..ಇತಿಹಾಸ, ವಿಜ್ಞಾನ ಎಲ್ಲಾ ಸ್ವಲ್ಪ ಸ್ವಲ್ಪ ತಿಳ್ಕೊಂಡಿದ್ದೀನಿ.ಓದ್ತೀನಿ..ಬರೀತೀನಿ…ಹೀಗೆ ಒಟ್ನಲ್ಲಿ ಇಂದು ನಾನೇನು ಆಗಿದ್ದೇನೋ ಅದಕ್ಕೆ ಕಾರಣ ವಿಜಯಲಕ್ಷ್ಮೀ ಟೀಚರೇ ಅಂತ ಅಪ್ಪು ಹೇಳಿಕೊಂಡಿದ್ದಾರೆ.
ಪುನೀತ್ ‘ವಿಜಯ’ದ ಹಿಂದಿನ ಪವರ್ ಅಂತೆ ಆ ಟೀಚರ್..!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಚಂದನವನದ ಟಾಪ್ ನಟ..ಇಡೀ ಕನ್ನಡ ನಾಡಿನ ಹೆಮ್ಮೆಯ ಮಗ…ಕರುನಾಡ ಮಂದಿಯ ಪ್ರೀತಿಯ ಅಪ್ಪು…ಬಾಲ್ಯದಿಂದಲೂ ಕನ್ನಡಿಗರು ಅಪ್ಪುವನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ…ಅಪ್ಪುವೂ ಅಷ್ಟೇ…ಕನ್ನಡಿಗರನ್ನು, ಕನ್ನಡ ನಾಡು-ನುಡಿಯನ್ನು ಬಹಳ ಪ್ರೀತಿಸ್ತಾರೆ…ಬಾಲ್ಯದಲ್ಲೇ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರೂ ಯಾವುದೇ ಅಹಂ, ಹಮ್ಮು-ಬಿಮ್ಮನ್ನು ಹತ್ತಿರ ಸುಳಿಯದಂತೆ ನೋಡಿಕೊಂಡಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ ಬಿಡಿ. ಹಾಗೆಯೇ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅಪ್ಪು ಕೀರ್ತಿ ಇನ್ನೂ ಎತ್ತರಕ್ಕೆ ಪಸರಿಸಲಿ….