ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿದ್ದ ಎಂಟಿಬಿ ನಾಗರಾಜ್ ಈಗ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇದರ ಮಧ್ಯೆ ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸುವ ಮೂಲಕ ಎಂಟಿಬಿ ನಾಗರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ.
ಎಂಟಿಬಿ ನಾಗರಾಜ್ ಕಳೆದ ವಾರ 12.75 ಕೋಟಿ ರೂಪಾಯಿ ಬೆಲೆಬಾಳುವ ಐಷಾರಾಮಿ ಕಾರನ್ನು ಖರೀದಿಸಿದ್ದು, ಬುಧವಾರದಂದು ಇದೇ ಕಾರಿನಲ್ಲಿ ಆಗಮಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಒಂದು ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಂಟಿಬಿ ನಾಗರಾಜ್ ನೀಡಿದ್ದಾರೆ.
ರೋಲ್ಸ್ ರಾಯ್ಸ್ ಕಾರಿನ ಮೂಲ ಬೆಲೆ 6.95 ಕೋಟಿ ರೂಪಾಯಿಗಳಾಗಿದ್ದು, ಆದರೆ ಇದನ್ನು ದುಬೈನಿಂದ ಆಮದು ಮಾಡಿಕೊಳ್ಳಲಾದ ಕಾರಣ ತೆರಿಗೆ ಹಾಗೂ ಇತರೆ ಖರ್ಚು ಸೇರಿ ಇದರ ಬೆಲೆ 12.75 ಕೋಟಿ ರೂಪಾಯಿಗಳಾಗಿದೆ.