ಶ್ರೀರಾಂಪುರ ಅಂಡರ್ ಪಾಸ್ ಬಳಿ ಕೋಮಲ್ ಮೇಲೆ ಹಲ್ಲೆ ಪ್ರಕರಣಕ್ಕೆ ಇದೀಗ ಬೇರೆ ರೂಪ ದೊರೆತಿದೆ ಸಂಜೆ ತಮ್ಮ ಮಗಳನ್ನು ಟ್ಯೂಷನ್ನಿಂದ ಕರೆದುಕೊಂಡು ಬರಲು ಹೋಗಿದ್ದ ಕೋಮಲ್ ಅವರಿಗೆ ಮನೆಗೆ ಹಿಂತಿರುಗುವ ಸಮಯದಲ್ಲಿ ವಿನಾಕಾರಣ ಜಗಳದ ಮೂಲಕ ಶ್ರೀರಾಂಪುರದ ವಿಜಿ ಎಂಬಾತನಿಂದ ಕೋಮಲ್ ಅವರಿಗೆ ಹಲ್ಲೆಯಾಗಿದೆ ನಂತರ ಕೋಮಲ್ ಅವರು ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದ ನಂತರ ಈ ವಿಚಾರವಾಗಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು .
ಆದರೆ ಶ್ರೀರಾಂಪುರದ ವಿಜಿಯನ್ನು ಪರಿಶೀಲನೆ ನಡೆಸಿದ ಬಳಿಕ ಇದರ ಹಿಂದೆ ಯಾರದಾದರೂ ಕೈವಾಡ ಇರಬಹುದೆಂದು ಪೊಲೀಸರು ಪ್ರಶ್ನಿಸಿದಾಗ ಆರೋಪಿ ವಿಜಿ ಹೇಳಿಕೆ ನೀಡಿದ್ದಾನೆ ಬೈಕಿನಲ್ಲಿ ತೆರಳುವಾಗ ಅವರ ಕಾರು ನನ್ನ ಬೈಕಿಗೆ ಹೆಚ್ಚಾದ ನಂತರ ನಾನು ಅವರನ್ನು ಇಳಿಸಿ ಮಾತಿಗೆ ಮಾತು ಬೆಳೆದಾಗ ಹಲ್ಲೆ ಮಾಡಿದ್ದೇನೆ ಬೇರೆ ಯಾವ ಕಾರಣವೂ ಇಲ್ಲ ಎಂದು ಹೇಳಿದ್ದಾನೆ .