ಟಾಲಿವುಡ್ ನ ಸ್ಟಾರ್ ನಟ ವಿಜಯ ದೇವರಕೊಂಡ ಇತ್ತೀಚೆಗಷ್ಟೇ ಅಭಿನಯಿಸಿ ತೆರೆ ಕಂಡಿದ್ದ ಡಿಯರ್ ಕಾಮ್ರೇಡ್ ಚಿತ್ರ ಮುಗಿದ ನಂತರ . ವಿಜಯ ದೇವರಕೊಂಡ ಅವರ ಮುಂದಿನ ಚಿತ್ರದಲ್ಲಿ ಜಾಹ್ನವಿ ಕಪೂರ್ ಅವರನ್ನು ಪುರಿ ಜಗನ್ನಾಥ್ ಕೇಳಿದ್ದಾರೆ ಎಂದು ತೆಲುಗು ಚಿತ್ರರಂಗದಲ್ಲಿ ಸುದ್ದಿ ಹರಿದಾಡುತ್ತಿದೆ.
ವಿಜಯ ದೇವರಕೊಂಡ ನಟನೆಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ, ಅದನ್ನು ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವುದಾಗಿ ನಿರ್ಮಾಪಕಿ ಚಾರ್ಮಿ ಕೌರ್ ಇತ್ತೀಚೆಗೆ ಟ್ವೀಟ್ ಮಾಡಿ ತಿಳಿಸಿದ್ದರು.
ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಮುಂದಿನ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ಜೊತೆ ನಟಿಸಲಿದ್ದಾರೆ ಎಂಬುದು ಫೈನಲ್ ಆಗಿದೆ .