ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರಿಗೆ ವಿಭಿನ್ನ ರೀತಿಯ ರಾಜಕೀಯ ನಡೆಗಳಿಂದ ಅವಕಾಶ ಕೈತಪ್ಪಿದೆ. ಉನ್ನತ ಸ್ಥಾನ ನೀಡಲು ಜಾತಿಯ ಪಾತ್ರ ಮುಖ್ಯವಾಗಿರುತ್ತದೆ. ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಉನ್ನತ ಸ್ಥಾನ ನೀಡಲು ಜಾತಿ ಪ್ರಮುಖ ಪಾತ್ರ ಬಹಿಸುತ್ತದೆ. ಅಧಿಕಾರದಲ್ಲಿರುವ ರಾಜಕಾರಣಿಗಳ ಸಮುದಾಯಕ್ಕೆ ಆದ್ಯತೆ ನೀಡುವುದು ದುರ್ದೈವದ ಸಂಗತಿಯಾಗಿದೆ ಎಂದು ಪರಮೇಶ್ವರ್ ಅವರೆ ಹೇಳಿದ್ದಾರೆ.
ಸರ್ಕಾರ ನಡೆಸುವ ರಾಜಕಾರಣಿಗಳ ಮನಸ್ಸು ಬದಲಾಗಬೇಕು. ಹಾಗಾದರೆ ಮಾತ್ರ ಜಾತಿಯ ವ್ಯವಸ್ಥೆ ಬದಲಾಗಲು ಸಾಧ್ಯ ಎಂದು ಪರಮೇಶ್ವರ ಹೇಳಿದ್ದಾರೆ.