ಸ್ವತಃ ಉಮೇಶ್ ಕತ್ತಿ ಅವರೇ ಹೇಳಿದ್ದಾರೆ ನಾನು ಯಾರನ್ನೂ ಭೇಟಿ ಮಾಡಿಲ್ಲ. ಅತೃಪ್ತ ಶಾಸಕನೂ ನಾನಲ್ಲ. ಶಾಸಕನಾಗಿಯೇ ಮುಂದುವರೆಯುತ್ತೇನೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ಬೇಸರವಿಲ್ಲ . ಆದರೆ ಹಿರಿಯ ಶಾಸಕನಾಗಿರುವ ತಮಗೆ ಮಂತ್ರಿ ಸ್ಥಾನ ತಪ್ಪಿದ್ದೇಕೆ ಎಂಬ ಎಲ್ಲರ ಪ್ರಶ್ನೆಗೆ ಪಕ್ಷದ ನಾಯಕರ ಬಳಿ ಕೇಳಿದ್ದೇನೆ. ಅವರು ನೀಡಿರುವ ಉತ್ತರದಿಂದ ಸಮಾಧಾನಗೊಂಡಿದ್ದೇನೆ ಎಂದು ಉಮೇಶ್ ಕತ್ತಿ ತಿಳಿಸಿದ್ದಾರೆ.
ಉಮೇಶ್ ಕತ್ತಿ ತಮಗೆ ಯಾವ ಅಸಮಾಧಾನವೂ ಇಲ್ಲ ಎಂದು ಮೇಲಿನ ಮಾತಿಗೆ ಹೇಳುತ್ತಿದ್ದು, ಆದರೆ ಎಂಟು ಬಾರಿ ಶಾಸಕರಾಗಿರುವ ತಮಗೆ ಸಚಿವ ಸ್ಥಾನ ತಪ್ಪಿರುವುದು ಅವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.