No menu items!
11.7 C
Munich
Friday, May 1, 2026

ಬಿಜೆಪಿಯ ಅತೃಪ್ತ ಶಾಸಕರ ಸಂಪರ್ಕದಲ್ಲಿ ಇದ್ದಾರಂತೆ ಕುಮಾರಸ್ವಾಮಿ ಹೌದಾ !?

Must read

ಬಿಜೆಪಿಯ ನೂತನ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಿಂದ ಬೇಸರವಾಗಿರುವ ಬಿಜೆಪಿಯ ಅತೃಪ್ತ ಶಾಸಕರುಗಳ ಗುಂಪೊಂದು ರಚನೆಯಾಗಿದೆ ಎಂದು ಬಿಜೆಪಿ ವಲಯದಲ್ಲಿ ಸುದ್ದಿ ಕೇಳಿ ಬರುತ್ತಿದೆ . ನಿನ್ನೆ ಹದಿನೇಳು ಜನ ಶಾಸಕರು ಸಚಿವ ಸ್ಥಾನವನ್ನು ಸ್ವೀಕರಿಸಿದರು ಆದರೆ ರಮೇಶ್ ಜಾರಕಿಹೊಳೆ ಹಾಗೂ ರೇಣುಕಾಚಾರ್ಯ ಇನ್ನು ಕೆಲವರು  ಅತೃಪ್ತಿಯಲ್ಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ .

ಇದೀಗ ಕುಮಾರಸ್ವಾಮಿಯವರು ಅತೃಪ್ತ ಶಾಸಕರುಗಳ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ಯಡಿಯೂರಪ್ಪನವರ ನೆಮ್ಮದಿ ಕೆಡಿಸಿದೆ ಎಂದು ಹೇಳಲಾಗುತ್ತಿದೆ . ಇದರಿಂದ ನೂತನ ಸರ್ಕಾರಕ್ಕೆ ಏನಾದರೂ ತೊಂದರೆ ಇದೆಯಾ ಎಂಬ ಭಯ ಕೂಡ ಬಿಜೆಪಿ ವಲಯದಲ್ಲಿದೆ ಎನ್ನಲಾಗಿದೆ . ಹಾಗೆಯೇ ನಿನ್ನೆ ಕೂಡ ಸಿಟಿ ರವಿ ಯೋಗ ಮತ್ತು ಯೋಗ್ಯತೆ ಇದ್ದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂಬ ಹೇಳಿಕೆ ತುಂಬಾ ವಿವಾದಕ್ಕೀಡಾಗಿದೆ . ಇದರಿಂದ ಬಿಜೆಪಿ ವಲಯದಲ್ಲಿ ಅತೃಪ್ತರ ಗುಂಪೊಂದು ರಚನೆಯಾಗಿದೆ . ಹಾಗೆಯೇ ಉಮೇಶ್ ಕತ್ತಿ ಅವರು ಕೂಡ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article