ನಿನ್ನೆ ರಾಜಭವನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಕನ್ನಡದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹದಿನೇಳು ಜನ ಶಾಸಕರು ಸಚಿವರ ಸ್ಥಾನವನ್ನು ಸ್ವೀಕರಿಸಿದರು .ಆದರೆ ಸಚಿವ ಸ್ಥಾನ ಆಕಾಂಕ್ಷಿಗಳು ಬಿಜೆಪಿ ವಲಯದಲ್ಲಿ ತುಂಬಾ ಜನ ಇದ್ದರು ಅವರಲ್ಲಿ ಭಿನ್ನಮತ ಮೂಡಿ ಬಂದಿದೆ ಹಾಗಾಗಿ ಆ ಅತೃಪ್ತ ಶಾಸಕರ ಮುಂದಿನ ನಡೆ ಏನು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿಬಂದಿದೆ .
ಇದರಿಂದ ಯಡಿಯೂರಪ್ಪ ಅವರ ನೂತನ ಸರ್ಕಾರಕ್ಕೆ ಏನಾದರೂ ತೊಂದರೆ ಇದೆಯಾ ಆದರೆ ಇನ್ನು ಸ್ಕೃತ ಶಾಸಕರಿಂದ ಯಡಿಯೂರಪ್ಪನವರ ನೆಮ್ಮದಿ ಹಾಳಾಗಿದೆಯೇ ಎಂಬ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ಯಡಿಯೂರಪ್ಪ ಅವರೇ ಉತ್ತರ ಕೊಡಬೇಕಾಗಿದೆ ? ಹೀಗೆ ಸಚಿವ ಸ್ಥಾನ ವಂಚಿತರಾದ ಹೊನ್ನಳ್ಳಿಯ ರೇಣುಕಾಚಾರ್ಯ ಅವರು ಕೂಡ ಸುದ್ದಿಗಾರರೊಂದಿಗೆ ಮಾತನಾಡಿದರು . ನಾನು ಯಾರ ಬಳಿಗೂ ಸಚಿವ ಸ್ಥಾನ ಕೇಳಲು ಹೋಗಿಲ್ಲ , ನನ್ನ ಗುರಿ ಏನಿದ್ದರೂ ಕ್ಷೇತ್ರದ ಅಭಿವೃದ್ಧಿಯಷ್ಟೇ ಎಂದು ಹೇಳಿದರು .