ಮಾಜಿ ಹಣಕಾಸು ಸಚಿವರಾಗಿರುವ ಚಿದಂಬರಂ . ಯುಪಿಎ ಸರ್ಕಾರದಲ್ಲಿ ಗೃಹ ಸಚಿವರಾಗಿ ಸಿಬಿಐ ಹಾಗೂ ದೆಹಲಿ ಪೊಲೀಸ್ ಇಲಾಖೆಯನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದ್ದ ಚಿದಂಬರಂ ರನ್ನೆ ಇಂದು ಅದೇ ತನಿಖಾ ಸಂಸ್ಥೆಯೇ ಬಂಧಿಸಿದೆ . ಇದರಲ್ಲಿ ರಾಜಕೀಯ ದ್ವೇಷ ವಿರಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ . ಇದರಲ್ಲಿ ಅಮಿತ್ ಶಾ ಕೈವಾಡ ಏನಾದರೂ ಇದೆಯಾ ಎಂಬ ಪ್ರಶ್ನೆ ಕೆಲವರಲ್ಲಿ ಕಾಡ್ತಿದೆ .
ಆದರೆ ಬಂಧನದ ವಾರಂಟ್ ಕೂಡ ಸಿಬಿಐ ಅಧಿಕಾರಿಗಳು ನೀಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಕೂಡಲೇ ಬಂಧಿಸುವುದು ಯಾವ ಕ್ರಮ. ಕೇಂದ್ರ ಸರ್ಕಾರದಲ್ಲಿರುವ ಕೆಲವರ ಆದೇಶದ ಮೇರೆಗೆ ಈ ರೀತಿ ಕೃತ್ಯ ಎಸಲಾಗುತ್ತಿದೆ ಎಂದು ಚಿದಂಬರಂ ಆರೋಪಿಸಿದ್ದಾರೆ.