ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ. ಈ ಹಿಂದೆ ದರ್ಶನ್ ಅವರ ಸಿನಿಮಾಗಳೆಂದರೆ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದ್ದವು , ಸಾಲು ಸಾಲು ಹಿಟ್ ನೀಡಿದ್ದ ದರ್ಶನ್ ಅವರು ಇದ್ದಕ್ಕಿದ್ದಂತೆ ಒಂದಾದ ಮೇಲೊಂದರಂತೆ ಫ್ಲಾಪ್ ಚಿತ್ರ ನೀಡಲು ಶುರು ಮಾಡಿದರು.
ಹೀಗೆ ಸಾಲು ಸಾಲು ಸೋಲುಗಳಿಂದ ದರ್ಶನ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲಿಲ್ಲ. ಇಂತಹ ಸಂದರ್ಭದಲ್ಲಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಜಗ್ಗೇಶ್ ಅವರು ದರ್ಶನ್ ಸಲ್ಮಾನ್ ಖಾನ್ ಗಿಂತ ಹೆಚ್ಚು , ಒಂದೊಳ್ಳೆ ಕತೆ ಇಟ್ಟುಕೊಂಡು ದರ್ಶನ್ಗೆ ಸಿನಿಮಾ ಮಾಡಿದರೆ ಸಲ್ಮಾನ್ ಖಾನ್ ನನ್ನು ಮೀರಿಸುವಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಅನ್ನು ಆ ಚಿತ್ರ ಮಾಡಲಿದೆ ಎಂದು ಜಗ್ಗೇಶ್ ಅವರು ಹೇಳಿದ್ದರು.
ಇದೀಗ ಜಗ್ಗೇಶ್ ಅವರು ಹೇಳಿದ್ದ ಮಾತು ನಿಜವಾಗಿದ್ದು ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಕೋಟಿ ಕೋಟಿ ಬಾಚಿದೆ. ಜಗ್ಗೇಶ್ ಅವರು ಅಂದು ಹೇಳಿದ್ದ ಮಾತು ಇಂದು ನಿಜವಾಗಿದ್ದು ಒಂದೊಳ್ಳೆ ಕತೆ ಡಿಬಾಸ್ ಗೆ ಸಿಕ್ಕಿದ ಕಾರಣ ದೊಡ್ಡ ಮಟ್ಟದ ಕಲೆಕ್ಷನ್ ಆಗಿದೆ. ಇನ್ನು ಜಗ್ಗೇಶ್ ಅವರು ಅಂದು ಮಾತನಾಡಿದ್ದ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಟ್ವಿಟ್ಟರ್ನಲ್ಲಿ ಹಾಕಿ ಜಗ್ಗಣ್ಣ ಹೇಳಿದ ಮಾತು ಇಂದು ನಿಜವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ಅವರು ದರ್ಶನ್ ಯಶಸ್ಸಿನ ಬಗ್ಗೆ ತುಂಬಾ ಸಂತೋಷ ಪಟ್ಟಿದ್ದಾರೆ & ಇದೇ ರೀತಿ ನಮ್ಮ ಕನ್ನಡ ನಟರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ.