ಕಿರಿಕ್ ಪಾರ್ಟಿ ಚಿತ್ರ ಬರದೇ ಇದ್ದಿದ್ದರೆ ಆ ಚಿತ್ರಕ್ಕೆ ರಕ್ಷಿತ್ ಅವರು ರಶ್ಮಿಕಾ ಮಂದಣ್ಣ ಅವರನ್ನು ನಾಯಕಿಯಾಗಿ ಆಯ್ಕೆ ಮಾಡದೇ ಇದ್ದಿದ್ದರೆ ರಶ್ಮಿಕಾ ಎಂಬ ಹುಡುಗಿ ನಟಿ ಅಲ್ಲ ಸೀರೆಯ ಒಂದು ಜಾಹೀರಾತಿನಲ್ಲಿಯೂ ಸಹ ಕಾಣಿಸಿಕೊಳ್ಳಲು ಆಗುತ್ತಿರಲಿಲ್ಲ. ಯಾವುದೇ ರೀತಿಯ ದೊಡ್ಡ ಮಟ್ಟದ ಟ್ಯಾಲೆಂಟ್ ಇಲ್ಲದಿದ್ದರೂ ಸಹ ಅತಿ ಬೇಗನೆ ಯಶಸ್ಸನ್ನು ಪಡೆದ ರಶ್ಮಿಕಾ ಬೇರೆ ಇಂಡಸ್ಟ್ರಿಯಲ್ಲಿ ಅಭಿನಯಿಸಲು ಆರಂಭಿಸಿದಳು.
ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಇತ್ತೀಚೆಗಷ್ಟೇ ತಮಿಳು ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಅಷ್ಟಾಗಿ ಬರುವುದಿಲ್ಲ ಮಾತನಾಡುವುದು ಕಷ್ಟ ಎಂದು ಹೇಳಿದ್ದಳು. ರಶ್ಮಾಕಾಳ ಈ ಹೇಳಿಕೆಗೆ ಕನ್ನಡ ಪರ ಸಂಘಟನೆಗಳು ಕಿಡಿಕಾರಿದವು ಮತ್ತು ಆಕೆಯನ್ನು ಕ್ಷಮೆ ಕೇಳುವಂತೆ ಆಗ್ರಹ ಮಾಡಿದವು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ ಮಂದಣ್ಣ ನಾನು ತಪ್ಪು ಮಾಡಿಲ್ಲ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಬೇಕಾದರೆ ಕೋರ್ಟಿನಲ್ಲಿ ಕೇಸ್ ಹಾಕಿಕೊಳ್ಳಿ ಅಲ್ಲಿಯೇ ಹೋರಾಡುತ್ತೇನೆ ಎಂದು ಹೇಳಿದ್ದಾರೆ.
ಮತ್ತೊಮ್ಮೆ ಈ ರೀತಿಯ ಉದ್ಧಟತನವನ್ನು ಕನ್ನಡಿಗರ ವಿರುದ್ಧ ತೋರಿಸಿರುವ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಕನ್ನಡಿಗರು ಮತ್ತೊಮ್ಮೆ ರೊಚ್ಚಿಗೆದ್ದಿದ್ದಾರೆ. ಬೆಳೆಸಿದ ಇಂಡಸ್ಟ್ರಿ ಮತ್ತು ಬೆಳೆಸಿದ ಜನರ ವಿರುದ್ಧವೇ ರಶ್ಮಿಕಾ ಮಂದಣ್ಣ ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.