ಬಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಚಿತ್ರವೊಂದು ಸದ್ಯಕ್ಕೆ ರದ್ದುಗೊಂಡಿದೆ.
ಸಂಜಯ್ ಲೀಲಾ ಭನ್ಸಾಲಿ ಅವರ, ಸಲ್ಮಾನ್ ಖಾನ್ ನಟನೆಯ ‘ಇನ್ಶಲ್ಲಾ’ ಚಿತ್ರ ಸೆಪ್ಟೆಂಬರ್‌ನಲ್ಲಿ ಆರಂಭವಾಗಬೇಕಿದ್ದ ಈ ಚಿತ್ರ ಕೆಲವು ಕಾರಣಗಳಿಂದ ವಿಳಂಬವಾಗುತ್ತಿದೆ.
ಇದರಿಂದ ಅವರ ಅಭಿಮಾನಿಗಳಿಗೆ ಭಾರೀ ನಿರಾಶೆಯಾಗಿದೆ
ಆದರೆ ನಿರ್ದೇಶಕ ಎಸ್.ಎಸ್.ರಾಜಮೌಳಿಗೆ ಮಾತ್ರ ಈ ವಿಚಾರ ಬಹಳ ಖುಷಿ ತಂದಿದೆ ಎಂದು ಹೇಳಲಾಗುತ್ತಿದೆ.
ಯಾಕೆ ಅಂತೀರಾ? ಅದಕ್ಕೂ ಕಾರಣವಿದೆ.
‘ಇನ್ಶಲ್ಲಾ ಚಿತ್ರದಲ್ಲಿ ನಾಯಕಿಯಾಗಿ ಪಾತ್ರ ಗಿಟ್ಟಿಸಿಕೊಂಡಿದ್ದರು ಆಲಿಯಾ. ಈ ಹಿನ್ನೆಲೆಯಲ್ಲಿ ಆಲಿಯಾ ರಾಜಮೌಳಿಗೆ ‘ಇನ್ಶಲ್ಲಾ’ ನಂತರ ‘ಆರ್‌ಆರ್‌ಆರ್’ಗೆ ಡೇಟ್ಸ್ ನೀಡುವುದಾಗಿ ಹೇಳಿದ್ದರಂತೆ. ಆದರೆ ಈಗ ‘ಇನ್ಶಲ್ಲಾ’ ಚಿತ್ರ ಸ್ಥಗಿತಗೊಂಡಿರುವುದರಿಂದ ಆಲಿಯಾ ‘ಆರ್‌ಆರ್‌ಆರ್’ಗೆ ಸುಲಭವಾಗಿ ತಮ್ಮ ಡೇಟ್ಸ್ ನೀಡಬಹುದೆಂದು ಹೇಳಲಾಗುತ್ತಿದೆ.
ಆರ್‌ಆರ್‌ಆರ್’ ಚಿತ್ರದಲ್ಲಿ ಮೆಗಾ ಸ್ಟಾರ್ ಪುತ್ರ ರಾಮ್ ಚರಣ್ ಗೆ ಜೋಡಿಯಾಗಿ ಆಲಿಯಾ ನಟಿಸುತ್ತಿದ್ದು, ಇವರ ಜೊತೆಗೆ ಯಂಗ್ ಟೈಗರ್ ಜೂನಿಯರ್ ಎನ್ ಟಿಆರ್ ಸಹ ನಟಿಸುತ್ತಿದ್ದಾರೆ. ಚಿತ್ರವನ್ನು ಡಿವಿವಿ ದಾನಯ್ಯ ನಿರ್ಮಿಸುತ್ತಿದ್ದು, ಮಣಿ ಶರ್ಮಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರವು ಮುಂದಿನ ವರುಷ ಜುಲೈ 30, 2020 ರಂದು ತೆರೆಯ ಮೇಲೆ ತರಲು ಎಲ್ಲ ಸಿದ್ಧತೆಗಳು ನಡೆಯುತ್ತಿದೆ.