ಮೆಟ್ರೊ ಇಳಿದ ನಂತರ ಮನೆಗೆ ಮತ್ತು ಮನೆಯಿಂದ ಮೆಟ್ರೊ ನಿಲ್ದಾಣಕ್ಕೆ ಪ್ರಯಾಣಿಸಲು ಜನ ಹರಸಾಹಸ ಪಡುತ್ತಿದ್ದರು. ಟ್ರಾಫಿಕ್ ನಡುವೆ ಆಟೊ ಬುಕ್ ಮಾಡಿಕೊಂಡು ಮನೆಗೆ ತೆರಳಲು ಹೆಚ್ಚಿನ ಹಣ ನೀಡಬೇಕಾಗಿತ್ತು ಮತ್ತು ಬುಕ್ ಮಾಡಿದ ಆಟೊ ಬರಲು ಸಹ ಕೆಲ ಸಮಯ ಬೇಕಾಗಿತ್ತು. ಆದರೆ ಇದೀಗ ಮೆಟ್ರೊ ನಿಲ್ದಾಣದ ಬಳಿ ಪ್ರಯಾಣಿಕರ ಓಡಾಟಕ್ಕೆ ಅನುಕೂಲವಾಗುವಂತಹ ಹೊಸ ನಿಯಮ ಜಾರಿಯಾಗಿದೆ.
ಹೌದು ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ಈಗ ಹೊಸದೊಂದು ಯೋಜನೆ ಜಾರಿಯಾಗಿದ್ದು ಮೆಟ್ರೊ ನಿಲ್ದಾಣದ ಪಕ್ಕವೇ ಎಲೆಕ್ಟ್ರಿಕ್ ಬೈಕ್ ಸೇವೆ ಆರಂಭವಾಗಿದೆ. ಹೌದು ಈ ಎಲೆಕ್ಟ್ರಿಕ್ ಬೈಕ್ ಗಳನ್ನು ಬಳಸಿ ಪ್ರಯಾಣಿಕರು ಓಡಾಡಬಹುದಾಗಿದೆ. ಇನ್ನು ಈ ಯೋಜನೆಯನ್ನು ಬೆಂಗಳೂರು ಮೂಲದ ಬೈಕ್ ಶೇರಿಂಗ್ ಆ್ಯಪ್ ಕೊಂದು ಆರಂಭಿಸಿದ್ದು ಈ ಬೈಕ್ ಕಡಿಮೆ ದರದಲ್ಲಿ ಲಭಿಸಲಿದೆ ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟಲಿದೆ.