ಸೆ 1 ರಿಂದ ಹೊಸ ಟ್ರಾಫಿಕ್ ನಿಯಮ ಜಾರಿಯಾಗಿದ್ದೇ ತಡ ನೂತನವಾಗಿ ಇರಿಸಲಾಗಿರುವ ದಂಡವನ್ನು ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸರು ವಿಧಿಸ ತೊಡಗಿದ್ದಾರೆ. ಇನ್ನು ಗುರುಗ್ರಾಮದ ಸಿಕೇಂದ್ರಾಪುರ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ಆಟೊ ರಿಕ್ಷಾ ಚಾಲಕನಿಗೆ ಪೊಲೀಸರು 32500 ರುಪಾಯಿ ದಂಡವನ್ನು ವಿಧಿಸಿದ್ದಾರೆ.
ಮಹಮ್ಮದ್ ಮುಸ್ತಾಕಿಮ್ ಎಂಬ ಆಟೋ ಚಾಲಕನಿಗೆ ಈ ದೊಡ್ಡ ಮಟ್ಟದ ದಂಡವನ್ನು ಪೊಲೀಸರು ವಿಧಿಸಿದ್ದು , ಆತನ ಬಳಿ ವಾಹನ ಚಾಲನಾ ಪರವಾನಗಿ , ವಿಮೆ ಪತ್ರ , ನೋಂದಣಿ ಪ್ರಮಾಣ ಪತ್ರ ಮತ್ತು ಮಾಲಿನ್ಯ ಪ್ರಮಾಣಪತ್ರ ಯಾವುದೇ ದಾಖಲೆಗಳು ಇಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಈ ಯಾವುದೇ ದಾಖಲೆಗಳು ಇಲ್ಲದೆ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ಆಟೊ ರಿಕ್ಷಾ ಚಾಲಕನಿಗೆ 32500 ರೂಪಾಯಿ ದಂಡ ಮೊತ್ತದ ದಂಡವನ್ನು ವಿಧಿಸಲಾಗಿದೆ.