ಈಗಾಗಲೇ ಚಂದ್ರಕಕ್ಷೆಯಲ್ಲಿ ಇರುವ ಆರ್ಬಿಟರ್‍ನ ಕಾರ್ಯಾವಧಿ ಏಳೂವರೆ ವರ್ಷಗಳಾಗಿದ್ದು, ಅಲ್ಲಿಯವರೆಗೂ ತನ್ನ ನಿಗದಿತ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಲು ಅದು ಸಾಕಷ್ಟು ಇಂಧನವನ್ನು ಹೊಂದಿದೆ ಎಂದು ಶಿವನ್ ತಿಳಿಸಿದರು. ಹಾಗು ಪ್ರಧಾನಿ ನರೇಂದ್ರ ಮೋದಿ ಮಾತಿನ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಪ್ರಧಾನಿ ನಮಗೆ ಸ್ಫೂರ್ತಿ ಮತ್ತು ಬೆಂಬಲದ ಮೂಲ. ಅವರ ಮಾತು ನಮಗೆ ಪ್ರೇರಣೆ ನೀಡಿತು.
ಚಂದ್ರಯಾನ-2 ಯೋಜನೆಯು ಶೇ.100 ರಷ್ಟು ಯಶಸ್ವಿಯಾಗಿದೆ. ಸಾಫ್ಟ್ ಲ್ಯಾಂಡಿಂಗ್ ವೇಳೆ ಲ್ಯಾಂಡರ್ ಜೊತೆ ಸಂಪರ್ಕ ಕಡಿತಗೊಂಡಿತ್ತು ಅದರೆ ಇದೀಗ ಲ್ಯಾಂಡರ ಪತ್ತೆ ಅಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ಹೇಳಿದ್ದಾರೆ .