ಇತ್ತೀಚೆಗಷ್ಟೇ ಗಾಯಕ ನವೀನ್ ಸಜ್ಜು ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಕಾಂಬಿನೇಷನ್ನಲ್ಲಿ ಏನ್ ಚೆಂದನೋ ತಕೋ ಎಂಬ ಹಾಡು ಬಿಡುಗಡೆಯಾಗಿ ಯೂಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಆ ಹಾಡಿನಲ್ಲಿ ಯುವಕ ಮತ್ತು ಯುವತಿಯರಿಬ್ಬರ ನಡುವಿನ ಸಂಬಂಧವನ್ನು ಕೇಳಿ ಮತ್ತು ಹಾಸ್ಯಾಸ್ಪದ ರೀತಿಯಲ್ಲಿ ಹೇಳಲಾಗಿದೆ.
ಈ ಹಾಡಿನ ಸಾಲುಗಳೇ ಇದೀಗ ಈ ಹಾಡಿನ ಗಾಯಕ ಮತ್ತು ರಚನಾಕಾರರಿಗೆ ಮುಳುವಾಗಿದ್ದು ಹಾಡಿನಲ್ಲಿ ಗೌಡ ಸಮುದಾಯದ ಯುವತಿಯನ್ನು ಕೀಳು ಮಟ್ಟದಲ್ಲಿ ಬಿಂಬಿಸಲಾಗಿದೆ , ಹೀಗಾಗಿ ತಕ್ಷಣವೇ ನವೀನ್ ಸಜ್ಜು ಅವರು ಗೌಡ ಸಮುದಾಯವನ್ನು ಕ್ಷಮೆಯಾಚಿಸಬೇಕು ಎಂದು ನಿರ್ಮಾಪಕ ಭಾ.ಮಾ. ಹರೀಶ್ ಅವರು ತಿಳಿಸಿದ್ದಾರೆ.